BREAKING NEWS
Search
Pay cm protest

Sirsi ಕಾಂಗ್ರೆಸ್ ಕಚೇರಿಯಲ್ಲಿ ಶಿವರಾಮ್ ಹೆಬ್ಬಾರ್ ಗೆ Pay Money ಕಾಟ!

76

ಕಾರವಾರ,:- ಬಿಜೆಪಿ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಪಕ್ಷದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು ಶಿವರಾಮ್ ಹೆಬ್ಬಾರ್ ವಿರುದ್ಧ ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಬಾಗಿಲಿಗೆ, ಗೋಡೆಗೆ ಹೆಬ್ಬಾರ್ ಭಾವಚಿತ್ರವಿರುವ ಪೆಸಿಎಂ ಪೋಸ್ಟರ್ ಅಂಟಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಶಿರಸಿಯಲ್ಲಿ ಲೋಕಸಭಾ ಚುನಾವಣೆ ಹಾಗೂ ಶಿವರಾಮ್ ಹೆಬ್ಬಾರ್ ರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಕುರಿತು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜಾ ನೇತ್ರತ್ವದಲ್ಲಿ ಹಾಲಿ ಕಾಂಗ್ರೆಸ್ ಶಾಸಕರು, ಹಿರಿಯ ನಾಯಕರ ಸಭೆ ಕರೆಯಲಾಗಿತ್ತು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯ ಗೋಡೆ ,ಬಾಗಿಲುಗಳಿಗೆ ಹೆಬ್ಬಾರ್ ವಿರೋಧದ ಪೋಸ್ಟರ್ ಅಂಟಿಸಿದ್ದು ನಮ್ಮ ಪಕ್ಷ ನಮ್ಮ ಹಕ್ಕು ಭ್ರಷ್ಟರಿಗೆ ಜಾಗವಿಲ್ಲ,ಡೀಲ್ ನಿಮ್ದು ಕಮಿಷನ್ ನಮ್ದು. ಆಹಾರದ ಕಿಟ್ ಗೆ ಪೆಸಿಎಂ ಮಾಡಿ ಎಂದು ಪೋಸ್ಟ್ರರ್ ಹಾಕಿದ್ದು ಕ್ಯೂ.ಆರ್ ಕೋಡಲ್ಲಿ‌ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಪೋಸ್ಟರ್ ಸಹ ಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡುವ ಕುರಿತು ಶಿರಸಿ ತಾಲೂಕಿನ ಹುಸರಿಯ ಪಾಂಡುರಂಗ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಸಭೆಯ ಬಳಿಕ ಕಾರ್ಯಕರ್ತರ ನಡುವೆಯೇ ಪರ ವಿರೋಧ ಮಾತಿನ ಚಕಮಕಿ ನಡೆಯಿತು.

ಹೆಬ್ಬಾರ್ ಪರ ಒಲವು ಹೊಂದಿರುವ ಕಾರ್ಯಕರ್ತರು ಪಕ್ಷಕ್ಕೆ ಬರಬೇಕು ಎಂದರೇ ಶಿರಸಿ ಶಾಸಕ ಭೀಮಣ್ಣ ಪರ ಹಾಗೂ ಕಾಂಗ್ರೆಸ್ ಮೂಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಇನ್ನು ಹಿರಿಯ ನಾಯಕ ಮಾಜಿ ಸಚಿವ ,ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸಹ ಹೆಬ್ಬಾರ್ ಬಿಜೆಪಿ ಯಲ್ಲಿ ಅಧಿಕಾರ ಅನುಭವಿಸಿ ಉತ್ತಮವಾಗಿದ್ದಾರೆ,ಇಲ್ಲಿ ಬಂದು ಏನು ಮಾಡುತ್ತಾರೆ,ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ಸಮ್ಮತಿಸುತ್ತದೆ, ನನ್ನ ಬಳಿಯೂ ಹೆಬ್ಬಾರ್ ಪಕ್ಷಕ್ಕೆ ಬರುವ ಬಗ್ಗೆ ಮಾತನಾಡಿಲ್ಲ ಎಂದು ಹೆಬ್ಬಾರ್ ಪಕ್ಷಕ್ಕೆ ಬರುವ ಕುರಿತು ಮಾರ್ಮಿಕವಾಗಿ ವಿರೋಧಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!