Uttara Kannada district MP Vishweshwar Hegde kageri

ಸಿದ್ದರಾಮಯ್ಯ ಸಮಾಜವಾದಿ ಅಲ್ಲ,ಮಜಾವಾದಿ-ಸಂಸದ ವಿಶ್ವೇಶ್ವರ ಹೆಗಡೆ

35

Sirsi News:– ರಾಜ್ಯ ಸರ್ಕಾರ (Karnataka state government )ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರೋ ಸರ್ಕಾರ. ವಾಲ್ಮೀಕಿ ನಿಗಮ ಹಗರಣ ಹಾಗೂ ಮೂಡಾ (Muda) ಹಗರಣ ಇದಕ್ಕೆ ದೊಡ್ಡ ಸಾಕ್ಷಿ 178 ಕೋಟಿ ರೂಪಾಯಿ ಹಗರಣ ಮುಖ್ಯಮಂತ್ರಿಗಳ ( Chief Minister) ಗಮನಕ್ಕೆ ಬಂದೇ ಆಗಿರುತ್ತೆ.

ಸಮಾಜವಾದಿ ಹೇಗೆ ಮಜಾವಾದಿ ಆಗಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ಮಾಜಿ ಸ್ಪೀಕರ್ ಹಾಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಗುರುವಾರ ಶಿರಸಿಯಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು ಮೂಡಾ ಹಗರಣದಲ್ಲಿ ಸ್ವತಃ ಸಿಎಂ ಭಾಗಿ ಆಗಿದ್ದಾರೆ,2 ಸೈಟ್ ಗೆ ಅರ್ಹ ಇರೋ ಸಿಎಂ ಪತ್ನಿಗೆ 14 ಸೈಟ್ ನೀಡಿದ್ದಾರೆ.

ಸರ್ಕಾರದ ಹಣವನ್ನ ಕೊಳ್ಳೆ ಹೊಡೆದು ಭ್ರಷ್ಟಾಚಾರ ಮಾಡಿದ್ದಾರೆ.ಭೈರತಿ ಸುರೇಶ್ ವಿಶೇಷ ವಿಮಾನದಲ್ಲಿ ತೆರಳಿ ಕಡತಗಳನ್ನ ವಾಪಸ್ ತಂದಿಟ್ಟಿದ್ದಾರೆ.

ಮುಖ್ಯಮಂತ್ರಿಗಳೇ ಹಗರಣದಲ್ಲಿ ತೊಡಗಿಸಿಕೊಂಡಿರೋದ್ರಿಂದ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು. ಈ ಹಗರಣಗಳನ್ನ ತನಿಖೆಗೆ ಸಿ.ಬಿ.ಐ ಗೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಇನ್ನು ಎಸ್‌ಟಿ ಸೋಮಶೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಎಸ್.ಟಿ ಸೋಮಶೇಖರ್ ಆಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ರು,
ಅವರು ಹಗರಣದಲ್ಲಿ ಭಾಗಿ ಆಗಿರೋದ್ರಿಂದ ಕಾಂಗ್ರೆಸ್ ಬಗ್ಗೆ ಮೃದುವಾಗಿ ಮಾತನಾಡುತ್ತಾರೆ.
ಈ ರೀತಿ ಮಾತನಾಡುವ ಅವರಿಗೆ ರಕ್ಷಣೆ ಬೇಕಾಗಿದೆ ಅಂತ ನಾವು ಅರ್ಥೈಸಿಕೊಳ್ಳಬೇಕಾಗಿದೆ.
ಈ ವಿಷಯ ಅವ್ರಿಗೆ ಗೊತ್ತಿತ್ತು ಅಂತಾದ್ರೆ ಅವ್ರು ಅದ್ನ ನಿಲ್ಲಿಸಬೇಕಿತ್ತು ಎಂದು ಸೋಮಶೇಖರ್ ವಿರುದ್ಧ ಕಾಗೇರಿ ಆರೋಪ ಮಾಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!