BREAKING NEWS
Search

Sirsi|ಹುಡುಗಿ ಹುಚ್ಚಿನಲ್ಲಿ ಮೊಬೈಲ್ ನಂಬರ್ ನೀಡದ ಗೆಳಯನಿಗೆ ಚಾಕು ಇರಿದ ಭೂಪನಿಗೆ 10 ವರ್ಷ ಶಿಕ್ಷೆ.

71

ಕಾರವಾರ:- ತಾನು ಪ್ರೀತಿಸುತಿದ್ದ ಯುವತಿಯ ಮೊಬೈಲ್ ನಂಬರ್ (Mobil number) ನೀಡಿಲ್ಲ ಎಂದು ಗೆಳಯನಿಗೇ ಚಾಕು ಇರಿದು ಕೊಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ (jaile )ಹಾಗೂ 14 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಸಿದ್ದಾಪುರ (siddapura) ತಾಲೂಕಿನ ಅಕ್ಕುಂಜಿಯ ಹುರಳಿಕೊಪ್ಪ ನಿವಾಸಿ ಸುಮನ್ ಶಂಕ್ರೊಪ್ಪ ಗೌಡರ್ ಶಿಕ್ಷೆಗೊಳಗಾದ ಅಪರಾಧಿ.

ಚಾಕು ಇರಿತಕ್ಕೆ ಒಳಗಾಗಿದ್ದ ಪವನ್ ನಾಯ್ಕ ಹಾಗೂ ಸುಮನ್ ಗೆಳೆಯರಾಗಿದ್ದರು.ಒಮ್ಮೆ ಪವನ್ ತಂಗಿಯನ್ನು ನೋಡಿದ್ದ ಸುಮನ್ ಆಕೆಯ ರೂಪಕ್ಕೆ ಮನಸೋತು ಪ್ರೀತಿಗೆ ಬಿದ್ದಿದ್ದನು.ಆಕೆಯ ನಂಬರ್ ಕೊಡುವಂತೆ ಪವನ್ ಗೆ ಒತ್ತಾಯಿಸುತಿದ್ದರೂ ಆತ ನಂಬರ್ ನೀಡಿರಲಿಲ್ಲ.

ಇದನ್ನೂ ಓದಿ:-ಬಿಜೆಪಿ ಹಣದ ಕಥೆ ಬಿಚ್ಚಿಟ್ಟ ಶಿವರಾಮ್ ಹೆಬ್ಬಾರ್!

ರೊಚ್ಚಿಗೆದ್ದ ಸುಮನ್ ಸಿದ್ದಾಪುರದ ಅವರಗುಪ್ಪ ಕಾಲೇಜಿನ ಹಿಂಭಾಗ ಕರೆಸಿಕೊಂಡು ತನ್ನ ಗೆಳೆಯರೊಂದಿಗೆ ಸೇರಿ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪಿ.ಎಸ್‌ಐ ಮಂಜೇಶ್ವರ ಚಂದಾವರ್ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.ಹೆಡ್ ಕಾನ್ಸಟೇಬಲ್ ಎ.ಹೆಚ್.ಸೈಯದ್ ಇವುಗಳಿಗೆ ಪೂರಕ ದಾಖಲೆ ಸಲ್ಲಿಸಿದ್ದರು. ಈ ಕುರಿತು ಶಿರಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ಉತ್ತಮ ವಾದ ಮಂಡಿಸಿ ಆರೋಪಿಗೆ ಶಿಕ್ಷೆಯಾಗುವಲ್ಲಿ ಸಹಕರಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!