Sirsi -kumta NH 766E Road heavy vehicle propheted for 4 month

ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ನಾಲ್ಕು ತಿಂಗಳು ಭಾರಿ ವಾಹನಗಳಿಗೆ ಬಂದ್

113

ಅಕ್ಟೋಬರ್ 15 ರಿಂದ ನಾಲ್ಕು ತಿಂಗಳು ರಾಷ್ಟ್ರೀಯ ಹೆದ್ದಾರಿ 766E

ಕಾರವಾರ :- ಸಾಗರಮಾಲಾ ಯೋಜನೆಯಡಿ ( sagarmala project ) ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766(E) (National Highway) ಕಾಮಗಾರಿಯನ್ನು ಶೀಘ್ರ ಮುಗಿಸುವ ಹಿನ್ನಲೆಯಲ್ಲಿ ಅಕ್ಟೋಬರ್ 15 ರಿಂದ 2025 ರ ಪೆಬ್ರವರಿ 25 ವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.

ಇನ್ನು ಸ್ಥಳೀಯವಾಗಿ ಓಡಾಡುವ ಆ ಭಾಗದ ಗ್ರಾಮದ ಜನರಿಗೆ ತೊಂದರೆ ಆಗದಂತೆ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಭಾರಿ ವಾಹನಕ್ಕೆ ಮಾತ್ರ ಪ್ರವೇಶ ನಿರ್ಭಂಧ ಇರಲಿದೆ.

ಹಿಂದೆ ಏಳು ತಿಂಗಳ ಕಾಲ ಬಂದ್ ಮಾಡಲು ಆದೇಶ ಮಾಡಲಾಗಿತ್ತು ಅದರ ಬಗ್ಗೆ ಈ ಕೆಳಗಿನ ಲಿಂಕ್ ನಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:- ಏಳು ತಿಂಗಳ ಕಾಲ ಕುಮಟಾ -ಶಿರಸಿ ಹೆದ್ದಾರಿ ಬಂದ್

ಬದಲಿ ವ್ಯವಸ್ಥೆ ಏನು?

1) ಕುಮಟಾ-ಶಿರಸಿ ಮೂಲಕ ಸಿದ್ದಾಪುರ ಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-766ಇ ಮಾರ್ಗವಾಗಿ ಲಘು ವಾಹನಗಳು ಸಂಚರಿಸಲು ಅವಕಾಶ

2) ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ-63. ಮತ್ತು ಎಸ್.ಹೆಚ್-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಲು ಅವಕಾಶ

3) ಮಂಗಳೂರು-ಹೊನ್ನಾವರ ಶಿರಸಿ ಮೂಲಕ ಸಿದ್ದಾಪುರ ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳಿಗೆ ಅವಕಾಶ.

ಆದೇಶ ಪ್ರತಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!