ಜಿಲ್ಲಾಧಿಕಾರಿ ನಿಮಿಷಕ್ಕೊಂದು ಆದೇಶ| ಜನ ಸುಸ್ತು! ಮೂರು ತಾಲೂಕಿಗೆ ರಜೆ ಘೋಷಣೆ.

99

ಕಾರವಾರ ;- ಉತ್ತರ ಕನ್ನಡ ಜಿಲ್ಲೆಯ ಕುಮಟಾ ,ಭಟ್ಕಳ,ಹೊನ್ನಾವರ ತಾಲೂಕಿನಾಧ್ಯಾಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮತ್ತೊಮ್ಮೆ ಆದೇಶ ಮಾಡಿದ್ದಾರೆ.

ಈ ಹಿಂದೆ ಕುಮಟಾ ಕ್ಕೆ ಮಾತ್ರ ರಜೆ ಘೋಷಣೆ ಮಾಡಲಾಗಿತ್ತು ,ನಂತರ ಹೊನ್ನಾವರಕ್ಕೆ ರಜೆ ಘೋಷಣೆ ಮಾಡಿದರು. ಇದೀಗ ಭಟ್ಕಳ ತಾಲೂಕಿಗೂ ಶಾಲಾ ಕಾಲೇಜಿಗೆ ಪರಿಷ್ಕೃತ ಆದೇಶ ಹೊರಡಿಸಿದ್ದು ಇದೀಗ ಗೊಂದಲಕ್ಕೆ ಕಾರಣವಾಗಿದೆ.

ಇದರಿಂದಾಗಿ ಪಾಲಕರಿಗೂ ಗೊಂದಲ ಆಗುತಿದ್ದು ಯಾವಾಗ ರಜೆ ಘೋಷಣೆ ಆಗಿದೆ ,ಆಗಿಲ್ಲವೇ ಎನ್ನುವ ಗೊಂದಲದಲ್ಲಿ ಪೋಷಕರು ಇರುವಂತಾಗಿದೆ.

ಒಂದೆಡೆ ಮಳೆಯಿಂದ ಜನ ತತ್ತರಿಸಿದರೇ ಇತ್ತ ರಜೆ ಘೋಷಣೆ ಗೊಂದಲದಲ್ಲಿ ಜನ ತಲೆಬಿಸಿ ಮಾಡಿಕೊಳ್ಳುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!