Uttrakannada ಅರ್ಹರಾದರೂ ಸಿಗದ ಗೃಹಲಕ್ಷ್ಮಿ ಯೋಜನೆ!

124

ಕಾರವಾರ, ಜನವರಿ 18: ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರು ಕೂಡ ಜಿಲ್ಲೆಯಲ್ಲಿ ಮಾತ್ರ ಗೃಹಲಕ್ಷ್ಮಿ ಯೋಜನೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಕೂಡ ಕೆಲವು ಮಹಿಳೆಯರು ಮೊದಲ ಕಂತಿನ ಹಣವನ್ನೇ ಪಡೆಯಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಅರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಪಡೆಯಲಾಗದೇ ಯೋಜನೆಯ ಲಾಭ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಯೋಜನೆ ಆರಂಭಗೊಂಡು 5 ತಿಂಗಳು ಕಳೆದರೂ ಇನ್ನೂ ಮೊದಲ ತಿಂಗಳ ಹಣ ಪಡೆಯದವರೂ ಜಿಲ್ಲೆಯಲ್ಲಿದ್ದಾರೆ.

ಇದನ್ನೂ ಓದಿ:- Gruha Lakshmi Scheme: ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ವಾ.? ಹಾಗಿದ್ರೆ ಈ ಕೆಲಸ ಮಾಡಿ

ಮೊದಲ ತಿಂಗಳು ನೋಂದಣಿಯಾದ 29,927 ಮಹಿಳೆಯರಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿರಲಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಫಲಾನುಭವಿಯನ್ನು ಸಂಪರ್ಕಿಸಿ ಕಾರಣ ಪಟ್ಟಿ ಮಾಡಿತ್ತು. ವಿವಿಧ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಕೆಲವರ ಬ್ಯಾಂಕ್‌ನಲ್ಲಿ ಒಂದು ಹೆಸರು, ಆಧಾರನಲ್ಲಿ ಇನ್ನೊಂದು ಹೆಸರಿತ್ತು. ಇನ್ನು ಕೆಲವರ ಬ್ಯಾಂಕ್ ಖಾತೆ ಬಳಕೆಯಿಲ್ಲದೇ ಸ್ಥಗಿತಗೊಂಡಿತ್ತು.ಇನ್ನು ಕೆಲವರ ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾಗಿರಲಿಲ್ಲ. ಇನ್ನು ಹಲವರ ರೇಶನ್ ಕಾರ್ಡ್‌ನಲ್ಲಿ ಮಹಿಳೆಯನ್ನು ಯಜಮಾನಿ ಎಂದು ಗುರುತಿಸಿರಲಿಲ್ಲ. ಅವರೆಲ್ಲವನ್ನೂ ಸರಿಪಡಿಸುವ ಕಾರ್ಯ ಈವರೆಗೂ ಪ್ರಗತಿಯಲ್ಲಿದೆ.

29 ರಲ್ಲಿ 16 ಸಾವಿರ ಜನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ. ಆದರೆ, ತಿದ್ದುಪಡಿಗಳು ಸರ್ವರ್‌ನಲ್ಲಿ ಅಪ್‌ಡೇಟ್ ಆಗದ ಕಾರಣ ಅಂಥವರಿಗೂ ಇನ್ನೂ ಹಣ ಜಮಾ ಆಗಿಲ್ಲ.

ಜಿಲ್ಲೆಯಲ್ಲಿ 3.46 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹರು ಎಂದು ಗುರುತಿಸಲಾಗಿತ್ತು. ಅದರಲ್ಲಿ 3.08 ಲಕ್ಷ (ಶೇ.88.86) ಯಜಮಾನಿಯರು ಸೆಪ್ಟೆಂಬರ್ ಅಂತ್ಯದ ಒಳಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ ತಿಂಗಳ ಮೊದಲ ಕಂತನ್ನು 2.68 ಲಕ್ಷ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಯಿತು. ಆದರೆ, ಅಚ್ಚರಿಯ ವಿಷಯ ಎಂದರೆ ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳ ಸಂಖ್ಯೆ 2.64 ಲಕ್ಷ ಕ್ಕೆ ಇಳಿಕೆಯಾಯಿತು.

ಹೊಸ ಫಲಾನುಭವಿಯ ಹೆಸರನ್ನು ಅನುಮೋದಿಸುವುದು ಮತ್ತು ಮೃತ ಯಜಮಾನಿಯ ಹೆಸರನ್ನು ಪಟ್ಟಿಯಲ್ಲಿ ತೆಗೆದು ಹಾಕಲು ಮಾತ್ರ ತಾಲೂಕಿನ ಸಿಡಿಪಿಒ ಗೆ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಯಾವುದೇ ಬದಲಾವಣೆ ಅಥವಾ ಸೇರ್ಪಡೆಗೆ ಅವಕಾಶವೇ ಇಲ್ಲ. ಮೊದಲು ತಿಂಗಳ ಹಣ ಜಮಾ ಹಲವು ಖಾತೆಗಳಿಗೆ ಎರಡನೇ ತಿಂಗಳು ಹಣ ವರ್ಗಾವಣೆಯಾಗಿಲ್ಲ. ಅದಕ್ಕೆ ಆಧಾರ ನಾಟ್ ಸೀಡೆಡ್ ಎಂದು ವರದಿ ತೋರಿಸುತ್ತಿದೆ. ಇನ್ನು ಕೆಲವು ಚಾಲ್ತಿ ಇರುವ ಖಾತೆಗಳೇ ಬ್ಯಾಂಕ್ ಅಕೌಂಟ್ ನಾಟ್ ವ್ಯಾಲೀಡ್ ಎಂಬ ವರದಿ ಬರುತ್ತಿದೆ. ಎರಡೆರಡು ದಿನಕ್ಕೆ ವರದಿ ಬದಲಾಗುತುತಿದ್ದು ಜನ ಹೈರಾಣವಾಗುದ್ದಾರೆ.

ಆಗಸ್ಟ್ ತಿಂಗಳಲ್ಲಿ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ 54.10 ಕೋಟಿ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಗೆ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 57.29 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ ತಿಂಗಳಲ್ಲಿ 64.51 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಈಗ ಅನುದಾನವನ್ನು ಜಿಲ್ಲೆಯಿಂದ ವಾಪಸ್ ತರಿಸಿಕೊಳ್ಳಲಾಗಿದೆ. ನೇರವಾಗಿ ರಾಜ್ಯದಿಂದಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇದೀಗ ಹೊಸ BPL ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೇ, ಮತ್ತೆ ಕೆಲವರು ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಯೋಜನೆ ಲಾಭ ಪಡೆಯಲು ಅರ್ಹರಾಗಿದ್ದರು ಕೂಡ ಬಿಪಿಎಲ್ ಕಾಡ್ ಅಗತ್ಯ ಇರುವ ಕಾರಣ ಅನೇಕರಿಗೆ ಯೋಜನೆ ಲಾಭ ಸಿಗದಂತಾಗಿದೆ. ತಿಂಗಳ ಹಿಂದೆ ಒಂದು ದಿನ ಮಾತ್ರ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಕಾರಣ ಇದೀಗ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದನ್ನೇ ಕಾಯುವ ಪರಿಸ್ಥಿತಿ ಎದುರಾಗಿದೆ.

ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ರಾಜ್ಯದಿಂದಲೇ debit ಮೂಲಕ ಹಣ ಜಮಾ ಆಗುತ್ತಿದೆ. ಬ್ಯಾಂಕ್, ಆಧಾರ ಕಾರ್ಡ್ ಸಮಸ್ಯೆಗಳಿದ್ದಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡಿ ಅದನ್ನು ಸರಿಪಡಿಸಲು ನಾವು ಕ್ರಮ ವಹಿಸುತ್ತಿದ್ದೇವೆ ಎಂದು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ.ಹುಲಿಗೆಮ್ಮ ಕುಕನೂರು ಹೇಳಿದ್ದಾರೆ.

ಜಿಲ್ಲೆಯ ಗೃಹಲಕ್ಷ್ಮಿ ಸ್ಥಿತಿಗತಿ:-

ತಿರಸ್ಕೃತ ಅರ್ಜಿ ಸಂಖ್ಯೆ -218

ಅನಾರೋಗ್ಯದಿಂದ ಹಾಸಿಗೆ ಹಿಡಿದವರು-135

ಆದಾಯ ತೆರಿಗೆ ಪಾವತಿದಾರರು-2,713

ವಲಸೆ ಹೋದವರು-8,749

ಆಧಾರ ಸಮಸ್ಯೆ-5,425

ಬ್ಯಾಂಕ್ ಖಾತೆ ಸಮಸ್ಯೆ-422

ಬ್ಯಾಂಕ್ ಕೆವೈಸಿ ಸಮಸ್ಯೆ-2,152

ರೇಶನ್ ಕಾರ್ಡ್ ಸಮಸ್ಯೆ-11,496

ಇದನ್ನೂ ಓದಿ:-ಕರ್ನಾಟಕದಿಂದ ನಿರ್ಮಲಾ,ಜಯಶಂಕರ್ ಲೋಕಸಭೆಗೆ ಸ್ಪರ್ಧೆ! ಕರಾವಳಿಯತ್ತ ಕೇಂದ್ರ ನಾಯಕರ ಚಿತ್ತ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!