Fisheries minister Mankalu vaidya

ಗ್ಯಾರಂಟಿ ಯೋಜನೆಯ ಫಲವನ್ನು ಸ್ಥಿತಿವಂತರು ಬಿಡಬೇಕು- ಸಚಿವ ಮಂಕಾಳು ವೈದ್ಯ

96

ಕಾರವಾರ :- ಆರ್ಥಿಕ ಸ್ಥಿತಿವಂತರು ಗ್ಯಾರಂಟಿ ಯೋಜನೆಯ ಲಾಭ ಪಡೆಯದೇ ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಕಾಳು ವೈದ್ಯರ ಗ್ಯಾರಂಟಿ ಯೀಜನೆಯಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿ ಆರ್ಥಿಕವಾಗಿ ಸ್ಥಿತಿವಂತರಿರುವ ಜನ ಇದರ ಲಾಭ ಪಡೆಯದೇ ಬಿಡಬೇಕು ,ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಇದನ್ನೂ ಓದಿ:-ಮಂಗನಕಾಯಿಲೆ ಗೆ 9 ಸಾವು | ಜಿಲ್ಲಾ ಉಸ್ತುವಾರಿ ಸಚಿವ ಪರಿಹಾರದ ಕುರಿತು ಏನಂದ್ರು?

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ವರ್ಕೌಟ್ ಆಗಿಲ್ಲ. ಜನ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ ನೀಡಿದಂತೆ ಜನರ ಬಳಿಯೂ ಕಾಂಗ್ರೆಸ್ ಗೆ ಮತ ಹಾಕುವಂತೆ ಬರೆಸಿಕೊಂಡಿದ್ದರೇ ಪಕ್ಷ ಗೆಲ್ಲುತಿತ್ತೇನೋ ,ಆದ್ರೆ ನಾವು ಮತಹಾಕುತ್ತಾರೆ ಎಂದು ಗ್ಯಾರಂಟಿ ಯೋಜನೆ ತಂದಿಲ್ಲ, ಎಷ್ಟೋ ಜನ ಬಡವರು ವಿದ್ಯುತ್ ಬಿಲ್ ಸಹ ಕಟ್ಟಲಾಗದಿದ್ದನ್ನು ನಾವು ಕಂಡಿದ್ದೇವೆ , ಅಂತವರಿಗೆ ಸಹಾಯ ಆಗಬೇಕು, ಬಡವರಿಗೆ ಇದರಿಂದ ಸಹಾಯವಾಗಬೇಕು ಎಂದು ತಂದಿದ್ದೇವೆ ಎಂದರು‌

ಇದನ್ನೂ ಓದಿ:-BHATKAL| ಕೋಕ್ತಿ ನಗರದ ಕರೆ ಸಂಪೂರ್ಣ ರಕ್ತ ಮಯ! ಶಾಕ್ ಆದ ಸ್ಥಳೀಯರು!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!