ಕಾರವಾರದಲ್ಲಿ ಅಂತರಾಷ್ಟ್ರೀಯ ಮಟ್ಟದ Cricket ಸ್ಟೇಡಿಯಂ|ಮೊದಲ ಹೆಜ್ಜೆ ಇಟ್ಟ ಶಾಸಕ ಸತೀಶ್ ಸೈಲ್.

138

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರ ದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನನ್ನು ನಿರ್ಮಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ಜಾಗದ ಲೀಸ್ ಅಗ್ರಿಮೆಂಟ್ ಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸಹಿ ಹಾಕಿದರು.

ಎಲ್ಲಿ ನಿರ್ಮಾಣ ? ಏನು ವ್ಯವಸ್ಥೆ?

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಇವರಿಗೆ
ಫೆಬ್ರವರಿ 29ರಂದು ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು
ಜಿಲ್ಲಾಡಳಿತದಿಂದ ಚಿತ್ತಾಕುಲದ 11.34 ಎಕರೆ ಜಮೀನು ಹಸ್ತಾಂತರ ಮಾಡಿದೆ. ಪ್ರತಿ ಎಕರೆಗೆ ವಾರ್ಷಿಕ 5.500 ರೂ ಕರಾರು ಬಾಡಿಗೆ ನಿಗದಿ ಮಾಡಿದೆ.

2013 ರಿಂದ 2018 ರ ಅವದಿಯಲ್ಲಿ ಶಾಸಕರಾಗಿದ್ದ ಇಂದಿನ ಶಾಸಕ ಸತೀಶ್ ಸೈಲ್ ಅವರು ತನ್ನ ಅಂದಿನ ಅವದಿಯಲ್ಲಿ ಸರಕಾರದ ಮೇಲೆ ಒತ್ತಡ ತಂದು ಗಡಿ ಪ್ರದೇಶದಲ್ಲಿ ಸಮುದ್ರ ಮತ್ತು ಕಾಳಿ ನದಿಯ ಸಂಗಮ ಪ್ರದೇಶದ ಗುಡ್ಡದ ರಮಣೀಯ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ಈ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ದರಿಸಿದ್ದರು.ಆದರೆ ಸರಕಾರ ಬದಲಾದ ಕಾರಣ ಈ ಪ್ರಕ್ರಿಯೆ ಅಲ್ಲಿಯೇ ತಟಸ್ಥವಾಗಿತ್ತು.ಇದೀಗ 2023 ರ ಚುನಾವಣೆಯಲ್ಲಿ ಸತೀಶ ಕೃಷ್ಣ ಸೈಲ್ ಮತ್ತೊಮ್ಮೆ ಈ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿ ತಾನು ಈ ಹಿಂದೆ ನೀಡಿದ್ದ ಬರವಸೆ ಯನ್ನು ಕಾರ್ಯರೂಪಕ್ಕೆ ತರಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುತ್ತಿದ್ದರು.ಇದರ ಪ್ರತಿಫಲವಾಗಿ ಎಲ್ಲಾ ಪ್ರಕ್ರಿಯೆಗಳು ಶಾಸಕ ಸತೀಶ್ ಸೈಲ್ ಮುಂದಾಳತ್ವದಲ್ಲಿ ದಲ್ಲಿ ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ.

ಶೀಘ್ರದಲ್ಲೇ KCA ಆಡಳಿತಾತ್ಮಕ ಅನುಮೋದನೆ ಪಡೆದು ಚಿತ್ತಾಕುಲ ಗೋಮಾಳದ ಗುಡ್ಡದಲ್ಲಿ ಸರ್ವೆ ಕಾರ್ಯ ನಡೆಸಿ ಕ್ರೀಡಾಂಗಣ ( stadium) ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಇದರ ಜೊತೆಗೆ ಕ್ರಿಕೆಟ್ ಅಕಾಡಮಿ ( Cricket Academy) ಯನ್ನು ಸಹ ಸ್ಥಾಪಿಸಿ ಇಲ್ಲಿನ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ ಎಂದು KCA ಅಧ್ಯಕ್ಷ ಮಾಜಿ ಟೆಸ್ಟ್ ಆಟಗಾರ ರಘುರಾಮ ಭಟ್ ಮಾಹಿತಿ ನೀಡಿದ್ದಾರೆ. ಇದಲ್ಲದೇ ಪ್ರತಿ ಜಿಲ್ಲೆಯಲ್ಲೂ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಗುರಿ ಇದೆ. ಮಡಿಕೇರಿ ( Madikeri) ಯಲ್ಲಿ ಈಗಾಗಲೇ ಕ್ರಿಕೆಟ್ ಸ್ಟೇಡಿಯಂ ನನ್ನು ಸಿದ್ದಮಾಡಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಸ್ಟೇಡಿಯಂ ನನ್ನು ನಿರ್ಮಿಸಲು ಸೂಕ್ತ ವ್ಯವಸ್ಥೆ ಬೇಕಾಗುತ್ತದೆ, 7 ಸ್ಟಾರ್ ,5ಸ್ಟಾರ್ ಹೋಟಲ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಬೇಕಾಗುತ್ತದೆ. ಇವೆಲ್ಲವನ್ನೂ ಪರಿಗಣಿಸಿ ಇಲ್ಲಿ ಯಾವ ರೀತಿಯ ಸ್ಟೇಡಿಯಂ ನನ್ನು ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದರು.

ಇನ್ನು ಈ ಕುರಿತು ಶಾಸಕ ಸತೀಶ್ ಸೈಲ್ ಕ್ರಿಕೆಟ್ ಅಸೋಸಿಯೇಷನ್ ಗೆ ಯಾವ ವ್ಯವಸ್ಥೆ ಬೇಕು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಟೇಡಿಯಂ ನಿರ್ಮಾಣ ಆದರೇ ಐಷಾರಾಮಿ ಹೋಟಲ್ ಗಳನ್ನು ತರಿಸುವ ಜವಬ್ದಾರಿ ನಮ್ಮದು. ಸ್ಥಳೀಯರಿಗೆ ಉದ್ಯೋಗ ದೊರಕಬೇಕು, ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಡುತ್ತೇವೆ ಎಂದ ಅವರು ಕ್ರೀಡಾಂಗಣಕ್ಕಾಗಿ ಸಾರ್ವಜನಿಕರ ಜಾಗವನ್ನು ಪಡೆಯದೇ ಸರ್ಕಾರಿ ಜಾಗದಲ್ಲೇ ನಿರ್ಮಾಣ ಮಾಡುತ್ತೇವೆ ,ಸ್ಥಳೀಯ ಜನರು ಭಯ ಪಡುವ ಅಗತ್ಯ ಇಲ್ಲ ಎಂದರು.

ಸದ್ಯ ಜಮೀನು ಹಸ್ತಾಂತರ ನೆರವೇರಿದ್ದು ಶೀಘ್ರದಲ್ಲೇ ಸರ್ವೆ ಕಾರ್ಯ ವನ್ನು KCA ಮಾಡಲಿದ್ದು ,ಆದಷ್ಟು ಶೀಘ್ರದಲ್ಲೇ ಕ್ರೀಡಾಂಗಣ ಕಾಮಗಾರಿ ಚಾಲ್ತಿ ಪಡೆಯಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!