Kumta news Mla dinkar shatty

ಪೊಲೀಸ್ ವರಿಷ್ಟಾಧಿಕಾರಿ ಎದುರೇ ಪೊಲೀಸರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಕುಮಟಾ ಶಾಸಕ! ಏನದು?

123

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಬ್ರಷ್ಟಾಚಾರ ಎನ್ನುವುದು ಮಾಮೂಲಿಯಾಗಿದೆ. ಇನ್ನು ಪೊಲೀಸ್ ಇಲಾಖೆಯಲ್ಲಿ ಪೊಲೀಸರು, ಅಕ್ರಮ ಮದ್ಯ,ಜೂಜಾಟ,ಬಡ್ಡಿ ವ್ಯವಹಾರದ ಜೊತೆ ಹಲವರಿಗೆ ವಂಚಿಸಿದ ಪ್ರಕರಣ ಸಹ ವರದಿಯಾಗಿದೆ.

ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ವಿರುದ್ಧ ಕೇಸ್ ದಾಖಲಾದ್ರೂ FIR ನಾಪತ್ತೆ! ಏನಾಯ್ತು ಪೊಲೀಸ್ ಇಲಾಖೆಗೆ?

ಇತ್ತೀಚಿನ ದಿನದಲ್ಲಿ ಪೊಲೀಸರ ಮೇಲೆ ನಂಬಿಕೆ ಹೋಗಿದೆ. ಇದೀಗ ಕುಮಟಾ ಶಾಸಕ ದಿನಕರ್ ಶಟ್ಟಿ ರವರೇ ಕುದ್ದು ಇಂದು ಕಾರವಾರದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ನೇತ್ರತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೃದಯಾಘಾತ ವಾದ ರೋಗಿಗಳನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಸಮಸ್ಯೆ ಕುರಿತು ಚರ್ಚಿಸುವಾಗ ,ಮರಣೋತ್ತರ ಪರೀಕ್ಷೆ ಮಾಡಿಸಲೇ ಬೇಕು , ಆಸ್ಪತ್ರೆಯಲ್ಲಿ ಮೃತಪಟ್ಟರೇ ಅಥವಾ ಮಾರ್ಗ ಮದ್ಯೆ ಮೃತಪಟ್ಟರೇ ವೈದ್ಯರು ಪೋಸ್ಟ್ ಮಾಟಮ್ ಮಾಡಿಸಲು ಹೇಳುತ್ತಾರೆ ಅದು ಸರಿಯಾಗಿದೆ.

ಆದರೇ ಠಾಣೆ ಗಮನಕ್ಕೆ ತಂದು ದೂರು ನೀಡಿದಾಗ ಮಾರ್ಚುರಿಯಿಂದ ತೆಗೆದುಕೊಂಡು ಹೋಗುವಾಗ ಪೊಲೀಸರಿಗೆ 5 ಸಾವಿರ ನೀಡಬೇಕು ಅದೇ ದೊಡ್ಡ ಸಮಸ್ಯೆ ಎಂದು ಸಭೆಯಲ್ಲಿ ಹಾಜುರಿದ್ದ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ರವರ ಮುಂದೆಯೇ ಹೇಳಿದರು.

ಇನ್ನು ಇದೇ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕಿ ಆಶಾ ರವರ ವಿರುದ್ಧ ಕಿಡಿ ಕಾರಿದ ಅವರು ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಧಾನ ಹೊರಹಾಕಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!