Punishment for the prison guard who cheated on bribery of Lokayukta

ಅರಣ್ಯಾಧಿಕಾರಿಯಿಂದ ಲೋಕಾಯುಕ್ತ ಅಧಿಕಾರಿಗೆ ಲಂಚ ಪ್ರಕರಣ| ಜೈಲಿನಲ್ಲಿ ವಂಚಿಸಿದವನಿಗೆ ಶಿಕ್ಷೆ

63

Mundgodu news :- ಧಾರವಾಡ (Darwad) ಜೈಲಿನಲ್ಲಿದ್ದುಕೊಂಡು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ( forest officer) ವಂಚಿಸಿದ್ದ ಆರೋಪಿಗೆ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ ಶನಿವಾರ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಧಾರವಾಡ ಸೆಂಟ್ರೆಲ್ ಜೈಲಿನ ಸ್ವೀಪರ್ ರಾಜು ಅರಮನೆ ಶಿಕ್ಷೆಗೊಳಗಾದವರಾಗಿದ್ದಾರೆ.

ಘಟನೆ ಏನು?

2014 ರಲ್ಲಿ ಮುಂಡಗೋಡಿನ (mundgodu)ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ ಭಟ್‌ರವರ ಮೇಲೆ ನಡೆದ ಲೋಕಯುಕ್ತ ದಾಳಿಯನ್ನು ಉಪಯೋಗಿಸಿಕೊಂಡು ಧಾರವಾಡ ಸೆಂಟ್ರೆಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುರುಗೇಶ ಕುಂಬಾರ ಎಂಬಾತನು ಅದೇ ಜೈಲಿನಲ್ಲಿ ಕಾರ್ಯ ನಿರ್ವಹಿಸುತಿದ್ದ ರಾಜು ಅರಮನೆ ಎಂಬಾತನ ಸಹಾಯ ಪಡೆದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ ರವರಿಗೆ ನಿಮ್ಮ ಮೇಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನಗೆ ಹಣ ನೀಡಿದಲ್ಲಿ ಬಿ ರಿಪೋರ್ಟನ್ನು ಹಾಕಿಸುವುದಾಗಿ ಹೇಳಿ ಅಶೋಕ್ ಭಟ್ ರಿಂದ 50 ಸಾವಿರ ಪಡೆದು ವಂಚಿಸಿದರು.

ಈ ಬಗ್ಗೆ ಮುಂಡಗೋಡು ಪೊಲೀಸ ಠಾಣೆಯಲ್ಲಿ ಮುರುಗೇಶ ಕುಂಬಾರ್ ಹಾಗೂ ರಾಜು ಅರಮನೆ ಎಂಬುವರ ಮೇಲೆಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಆಗಿನ ಸಿಪಿಐ ಹುಸೇನಖಾನ ಪಠಾಣ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆದರೆ ಪ್ರಮುಖ ಆರೋಪಿ ಮುರುಗೇಶ ಕುಂಬಾರ ಈವರೆಗೂ ಪತ್ತೆಯಾಗಿಲ್ಲ ಆದರೆ ಈತನಿಗೆ ಸಹಾಯ ಮಾಡಿದ ರಾಜು ಅರಮನೆ ಎಂಬಾತನು ಬಂಧಿಸಿದ್ದರು.

ಈಗ ರಾಜು ಅರಮನೆ ಎಂಬಾತನಿಗೆ ಮಾತ್ರ ಇಲ್ಲಿನ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ವಿನೋದ ಬಳಾನಾಯಕ ಅವರು ಈತನಿಗೆ ಮಾತ್ರ ಶನಿವಾರ ತೀಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಅಭಿಯೋಜಕರಾದ ಪ್ರಸಾದ್ ರಮೇಶ ಹೆಗಡೆ ಅವರು ಪ್ರಕರಣದಲ್ಲಿ ಸಾಕ್ಷವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ವಾದವನ್ನು ಮಂಡಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!