ಕಾರವಾರ :- ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ರೂವಾರಿ ಉತ್ತರ ಪ್ರದೇಶದ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿತೀನ್ ರಮೇಶ್ ಗೋಕರ್ಣ ರವರು ಇಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಮಹಾಬಲೇಶ್ವರ ದೇವರ ದರ್ಶನ ಪಡೆದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿ ಯಾದಂತೆ ಗೋಕರ್ಣವೂ ಅಭಿಮೃದ್ಧಿಯಾಗಲಿ. ಇಚ್ಚಾಶಕ್ತಿ ಬೇಕು ,ಜನರು ಬೆಂಬಲ ಬೇಕು ಆಗ ಏನಾದರೂ ಮಾಡಬಹುದು,
ಗೋಕರ್ಣ ಅಭಿವೃದ್ದಿಗೆ ಇಲ್ಲಿನ ಜನರ ಜೊತೆ ಮಾತೂಕತೆ ಆಗುವುದಿಲ್ಲವೋ ಅಲ್ಲಿವರೆಗೆ ಸಾಧಿಸಲು ಸಾಧ್ಯವಿಲ್ಲ.
ಇಲ್ಲಿಯ ಜನರು ಇಚ್ಚೆ ಪಟ್ಟರೆ ಕಾಶಿಯಂತೆ ಇಲ್ಲಿಯೂ ಅಭಿವೃದ್ಧಿ ಮಾಡಬಹುದು, ದೇಶದ ವಿಕಾಸ ದಲ್ಲಿ ಜನ ಭಾಗಿಯಾಗಲಿ ಎಂದರು.
ಗೋಕರ್ಣದ ಜನ ಬಯಸಬೇಕು
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಂತೆ ಗೋಕರ್ಣದಲ್ಲೂ ಮಾಡಲು ಜನ ಬಯಸಬೇಕು. ಜನರು ಇಚ್ಛೆ ಪಟ್ಟರೆ ಮಾಡಲು ಸಾಧ್ಯ. ನಾನು ಗೋಕರ್ಣ ಕ್ಕಾಗಿ ಯಾವುದೆ ಯೋಜನೆ ಸಿದ್ದಪಡಿಸಲ್ಲ, ಆದರೇ ಬಯಸಿದರೆ ಕಾಶಿಯಲ್ಲಿ ಯೋಜನೆ ರೂಪಿಸಿದಂತೆ ಇಲ್ಲಿಯೂ ರೂಪಿಸಬಹುದು ಎಂದರು.