ನವೆಂಬರ್ ನಲ್ಲಿ ನೋ ಶೇವ್!ಗಡ್ಡ ಬಿಡುವುದರ ಹಿಂದಿರುವ ಉದ್ದೇಶ ಏನು ಗೊತ್ತಾ?

135

ನವೆಂಬರ್ ತಿಂಗಳಿನಲ್ಲಿ ಗಡ್ಡ ಬಿಡುವ ಸಂಪ್ರದಾಯ ಈಗ ಎಲ್ಲೆಡೆ ಪ್ರಸಿದ್ಧಿ. ಬಹುತೇಕ ಯುವಕರು ಗಡ್ಡ ಬಿಟ್ಟು ಗತ್ತುಗೈರತ್ತನ್ನೂ ಮೆರೆಯುತ್ತಾರೆ. ಆದರೆ ಇದರ ನೈಜ್ಯ ಉದ್ದೇಶವೇ ಬೇರೆ.( No saved day)

ಈ ಅಭಿಯಾನವು 2009ರಿಂದ ಪ್ರಚಲಿತದಲ್ಲಿದೆ. 2007ರಲ್ಲಿ ಚಿಕಾಗೋಲ್ಯಾಂಡ್ ನ ಹಿಲ್ ಕುಟುಂಬದ ತಂದೆ ಮ್ಯಾಥ್ಯೂ ಹಿಲ್ ಕ್ಯಾನ್ಸರ್ ನಿಂದ ತೀರಿಕೊಂಡ ಬಳಿಕ ಅವರ ಮಕ್ಕಳು ಈ ಸಂಪ್ರದಾಯವನ್ನು ಆಚರಿಸಲು ಪ್ರಾರಂಭಿಸಿದರು.

ಪುರುಷರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೇವ್ ಮಾಡಲು ವ್ಯಯಿಸುವ ಹಣವನ್ನು ದಾನ ಮಾಡುವ ಸಲುವಾಗಿ ಈ `ನೋ ಶೇವ್ ನವೆಂಬರ್’ ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಕ್ಯಾನ್ಸರ್ ಪೀಡಿತರ ತಲೆ ಕೂದಲು ಕಿಮೋಥೆರಪಿ ಸಂದರ್ಭದಲ್ಲಿ ಅಥವಾ ಇನ್ಯಾವುದೇ ಚಿಕಿತ್ಸೆ ನಂತರ ಉದುರುತ್ತದೆ. ಇವರಿಗಾಗಿ ಹಲವರು ತಲೆ ಕೂದಲನ್ನೇ ದಾನ ಮಾಡುತ್ತಾರೆ. ಇದರ ಮುಂದುವರಿದ ಭಾಗವೆಂಬಂತೆ ಪುರುಷರು ನವೆಂಬರ್ ತಿಂಗಳು ಪೂರ್ತಿ ಶೇವ್ ಮಾಡದೆ ಆ ಹಣವನ್ನು ಕ್ಯಾನ್ಸರ್ ಪೀಡಿತರಿಗೆ, ಕ್ಯಾನ್ಸರ್ ಬಗೆಗಿನ ಸಂಶೋಧನೆಗೆ ಮತ್ತು ಕ್ಯಾನ್ಸರ್ ಜಾಗೃತಿಗಾಗಿ ದಾನ ಮಾಡುತ್ತಾರೆ.

ನವೆಂಬರ್‌ ತಿಂಗಳಲ್ಲಿ ‘ಮೊವೆಂಬರ್’ (Movemder) ಎನ್ನುವ ಮೀಸೆ ಬಿಡುವ ಆಚರಣೆಯೂ ಇದೆ. ಇದು ಇಂಗ್ಲಿಷ್‌ನ Moustche ಮತ್ತು November ಪದಗಳ ಮಿಶ್ರಣ. ಮೀಸೆ ಬಿಡುವ ಮೂಲಕ ಪುರುಷರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ.

ಭೂಗ್ರಹದ ಉತ್ತರಾರ್ಧಗೋಳದಲ್ಲಿ ಜನಸಂಖ್ಯೆಯ ಸಾಂದ್ರತೆ ಹೆಚ್ಚು. ನವೆಂಬರ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಚಳಿಗಾಲ ಇರುವುದರಿಂದ ಕ್ಷೌರ ಮಾಡಿಕೊಳ್ಳುವುದು ಹಿತ ಎನಿಸುವುದಿಲ್ಲ. ಮುಖದ ಮೇಲಿರುವ ಕೂದಲು ಚಳಿಗಾಲದಲ್ಲಿ ಒಂದು ರೀತಿಯ ಬೆಚ್ಚಗಿನ ಭಾವವನ್ನು ಕೊಡುತ್ತದೆ. ಹಾಗಾಗಿ ಗಡ್ಡ ಬಿಡಲು ಇದು ಸೂಕ್ತಕಾಲ. ಹೀಗಾಗಿಯೇ ಪುರುಷರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ನವೆಂಬರ್ ತಿಂಗಳನ್ನು ಆರಿಸಿಕೊಳ್ಳಲಾಗಿದೆ.
ನೋ ಶೇವ್ ನವೆಂಬರ್ ಅಭಿಯಾನಕ್ಕೆ ಅಧಿಕೃತ ವೆಬ್ಸೈಟ್ ಕೂಡ ಇದೆ. ಅಲ್ಲಿ ಸದಸ್ಯರಾಗಿ ನೀವು ಕೂಡ ಅಭಿಯಾನಕ್ಕೆ ಕೈ ಜೋಡಿಸಬಹುದಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!