BREAKING NEWS
Search

ನೇಪಾಳದ ಗಡಿ ದಾಟಿ ಭಟ್ಕಳಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಬಂಧನ.ಆಗಿದ್ದೇನು?

1830

ಅಕ್ರಮವಾಗಿ ಬಾಂಗ್ಲಾ, ಪಾಸಿಕ್ತಾನದಿಂದ ದೇಶಕ್ಕೆ ನುಸುಳುವ ವರದಿ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇನ್ನು ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಮಹಿಳೆಯನ್ನ ಪೊಲೀಸರು ಎಂಟು ವರ್ಷದ ನಂತರ ಬಂಧನ ಮಾಡಿದ್ದಾರೆ.

ವಿಶೇಷ ಅಂದರೆ ಕಳೆದ ಎಂಟು ವರ್ಷದಿಂದ ನಕಲಿ ದಾಖಲೆಗಳನ್ನ ಸೃಷ್ಟಿಸಿ ಮಹಿಳೆ ಭಟ್ಕಳದಲ್ಲಿಯೇ ನೆಲೆಸಿರುವ ವಿಷಯ ತನಿಖೆ ವೇಳೆ ಬಹಿರಂಗವಾಗಿದೆ.

ಪಾಕಿಸ್ತಾನ ಮೂಲದ ಖತೀಜಾ ಮಹರಿನ್ ಎನ್ನುವ ಮಹಿಳೆ ಕಳೆದ ಎಂಟು ವರ್ಷದಿಂದ ಭಾರತದ ಭಟ್ಕಳಕ್ಕೆ ಅಕ್ರಮವಾಗಿ ಆಗಮಿಸಿ ನೆಲಸಿದ್ದು, ಖತೀಜಾ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ಎನ್ನುವ ವ್ಯಕ್ತಿಯನ್ನ 2014ರಲ್ಲಿ ದುಬೈನಲ್ಲಿ ಪ್ರೀತಿಸಿ ಮದುವೆಯಾಗಿದ್ದಳು.

2014ರಲ್ಲಿಯೇ ಪ್ರವಾಸಿ ವಿಸಾ ಮೂಲಕ ಭಟ್ಕಳಕ್ಕೆ ಬಂದಿದ್ದ ಈಕೆ ನಂತರ ಪಾಕಿಸ್ತಾನಕ್ಕೆ ಮರಳಿದ್ದಳು. ನಂತರ ನೇಪಾಳದ ಮೂಲಕ ನುಸುಳಿ 2015ರಲ್ಲಿ ಅಕ್ರಮವಾಗಿ ಭಟ್ಕಳಕ್ಕೆ ಬಂದು ನೆಲಸಿದ್ದಳು.

ಮಹಿಳೆ ಇದ್ದ ಮನೆ.

ಎಂಟು ವರ್ಷದಿಂದ ಮಹಿಳೆ ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ನೆಳೆಸಿದ್ದಾಳೆ ಎನ್ನುವ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಆರೋಪಿತೆಯನ್ನ ಬಂದಿಸಿದ್ದಾರೆ.

ಆರೋಪಿತೆ ಖತೀಜಾ ತನ್ನ ಪತಿಯೊಂದಿಗೆ ಭಟ್ಕಳದ ನವಾಯತ ಕಾಲೋನಿಯ ಮನೆಯಲ್ಲಿ ನೆಲೆಸಿದ್ದಳು. ದಂಪತಿಗಳಿಗೆ ಮೂವರು ಮಕ್ಕಳಿದ್ದು, ಪಾಕಿಸ್ತಾನ ದಿಂದ ಬಂದ ಯಾವುದೇ ಮಾಹಿತಿಯನ್ನ ನೀಡಿರಲಿಲ್ಲ ಎನ್ನಲಾಗಿದೆ.

ಇನ್ನು ಈಕೆ ಇದ್ದ ಮನೆಯಲ್ಲಿ ಶೋಧಿಸಿದಾಗ ಈಕೆಯ ವೋಟರ್ ಐಟಿ, ಆಧಾರ್ ಖಾರ್ಡ್ ಸಿಕ್ಕಿದ್ದು, ಭಾರತ ಮೂಲದವಳೇ ಎಂದು ದಾಖಲೆ ಸೃಷ್ಟಿ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಆರೋಪಿ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಸೆಕ್ಷನ್ 468,471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಮದುವೆಯಾಗಿ ಭಟ್ಕಳಕ್ಕೆ ಬಂದಿದ್ದಾದರು, ಅಕ್ರಮವಾಗಿ ಪ್ರವೇಶ ಮಾಡಿ ಗೊತ್ತೆ ಇಲ್ಲದೇ ಇದ್ದಿದ್ದು, ಜೊತೆಗೆ ನಕಲಿ ದಾಖಲೆ ಸೃಷ್ಟಿಸಿ ಭಾರತದ ವೋಟರ್ ಐಡಿ, ಆಧಾರ್, ರೇಷನ್ ಕಾರ್ಡ್ ಮಾಡಿಸಿರುವುದು ಸಾಕಷ್ಟು ಗಂಭೀರ ಅಪರಾಧವಾಗಿದ್ದು , ಹೇಗೆ ಇವೆಲ್ಲವೂ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಭಟ್ಕಳದಲ್ಲಿ ಇದ್ದಾರೆ ಹಲವು ಪಾಕಿಸ್ತಾನಿ ಮಹಿಳೆಯರು.!

ಭಟ್ಕಳದಲ್ಲಿ ದುಬೈಗೆ ತೆರಳಿದ ವ್ಯಕ್ತಿಯೊಂದಿಗೆ ವಿವಾಹ ಇದು ಹೊಸತಲ್ಲ. ಗುಪ್ತ ದಳದ ಮಾಹಿತಿ ಪ್ರಕಾರ ಎಂಟಕ್ಕೂ ಹೆಚ್ಚು ಮಹಿಳೆಯರು ಭಟ್ಕಳದ ಯುವಕರನ್ನು ಮದುವೆಯಾಗಿದ್ದಾರೆ. ಹಲವರು ಈಗಲೂ ಪಾಕಿಸ್ತಾನದ ಪಾಸ್ ಪೋರ್ಟ ಹೊಂದಿದ್ದು ವಿಸಾ ಅವಧಿ ಮುಗಿದ ನಂತರ ನವೀಕರಣ ಮಾಡಿಸಿಕೊಂಡು ನೆಲಸಿದ್ದಾರೆ.

ಇನ್ನು ಪಾಕಿಸ್ತಾನದಿಂದ ಎಲ್ಲವನ್ನೂ ಬಿಟ್ಟು ಇದೇ ನನ್ನ ಭೂಮಿ ಎಂದು ಬಂದ ಮಹಿಳೆಯರು ಇಲ್ಲಿಯೇ ಇದ್ದು ಮೊಮ್ಮಕ್ಕಳನ್ನೂ ಸಹ ಕಂಡಿದ್ದಾರೆ. ಆದರೇ ಭಾರತದ ಹಕ್ಕಿಗಾಗಿ ಹಲವು ಭಾರಿ ಅರ್ಜಿ ಸಲ್ಲಿಸಿದರೂ ಈವರೆಗೂ ಪಾಕಿಸ್ತಾನ ಎಂಬ ಕಾರಣಕ್ಕೆ ಭಾರತೀಯ ಪೌರತ್ವ ನೀಡಿಲ್ಲ. ಹೀಗಾಗಿ ಭಟ್ಕಳೀಗರನ್ನು ಮದುವೆಯಾದ ಬಹುತೇಕರು ಪೌರತ್ವ ಸಮಸ್ಯೆ ಇಂದಿಗೂ ಎದುರಿಸುತಿದ್ದಾರೆ.

ಇನ್ನು ಪಾಕಿಸ್ತಾನದಿಂದ ಭಟಕ್ಕಳಿಗರನ್ನು ಮದುವೆಯಾದ ಮಹಿಳೆಯರ ಬಗ್ಗೆ ಭಾರತೀಯ ಗುಪ್ತದಳ ಮಾಹಿತಿ ಪಡೆದುಕೊಂಡು ಕಣ್ಣಿಟ್ಟಿದೆ. ಇದಲ್ಲದೇ ಪಾಕಿಸ್ತಾನದ ಪರ ಗುಪ್ತ ಮಾಹಿತಿದಾರರಾಗಿ ಕಾರ್ಯ ನಿರ್ವಹಿಸುತಿದ್ದಾರಾ? ಎಂಬ ಬಗ್ಗೆಯೂ ತನಿಖೆಗಳು ನಡೆಯುತ್ತಲಿವೆ. ಇವೆಲ್ಲದರನ್ನು ಹೊರತುಪಡಿಸಿದರೆ, ಭಟ್ಕಳ ಮತ್ತು ಪಾಕಿಸ್ತಾನಕ್ಕೆ ಮೊದಲಿನಿಂದಲೂ ವೈವಾಹಿಕ ನಂಟು ಇದೆ. ಭಾರತ ವಿಭಾಗ ಆಗುವ ಪೂರ್ವದ ನಂಟು ಇಲ್ಲಿದೆ. ಇಲ್ಲಿನ ಮಹಿಳೆಯರನ್ನು ಸಹ ಭಾರತ-ಪಾಕಿಸ್ತಾನ ವಿಭಾಗ ಪೂರ್ವ ನೆಂಟಸ್ತನದ ಸಂಬಂಧ ಇಂದಿಗೂ ಹಸಿಯಾಗಿದೆ. ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂಬ ಒಂದೇ ಒಂದು ಕಾರಣ ಎಲ್ಲರೂ ಭಯೋತ್ಪಾದಕರು ಎನ್ನುವ ಮಾತಗಳನ್ನು ಆಡುವಂತಿಲ್ಲ. ಪ್ರೀತಿ-ಬಾಂಧವ್ಯಕ್ಕೆ ದೇಶದ ಹಮ್ಮಿಲ್ಲ.
ಆದರೂ ದೇಶದ ಹಿತದೃಷ್ಟಿ ಇಲ್ಲಿ ಮುಖ್ಯವಾಗಿದ್ದು ವಂಚಿಸಿ ಬರುವವರಿಗೆ ಶಿಕ್ಷೆ ಆಗಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!