Plant4mother bjp mp vishweshvar hegde kageri

ತಂದೆಯ ಪುಣ್ಯ ತಿಥಿಯಂದು ತಾಯಿಯೊಂದಿಗೆ ಗಿಡ ನೆಟ್ಟ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.

63

PM Narendra Modi speaks in radio program first time after elections :- ಪ್ರಧಾನಿ ನರೇಂದ್ರವಮೋದಿಯವರು (PM Narendra modi) ಇಂದು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಕರೆಕೊಟ್ಟ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಸಂಸದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ (Vishweshvara hegde kageri) ಕಾಗೇರಿರವರು ಐದನೇ ವರ್ಷದ ತಂದೆ ಅನಂತ್ ಹೆಗಡೆ ರವರ ಪುಣ್ಯ ತಿಥಿಯ ಪ್ರಯುಕ್ತ ತಾಯಿ ಸರ್ವೇಶ್ವರಿ ಹಡಗಡೆ ರವರೊಂದಿಗೆ ಶಿರಸಿಯ ಕಾಗೇರಿಯ ತಮ್ಮ ನಿವಾಸದಲ್ಲಿ ತಾಯಿ ಹೆಸರಿನಲ್ಲಿ ಗಿಡ ನೆಟ್ಟರು.

2019ರ ಜೂನ್ ನಲ್ಲಿ ಅನಂತ್ ಹೆಗಡೆಯವರು ನಿಧನರಾಗಿದ್ದಾರೆ. ಅವರು ನಿಧನರಾಗಿ ಇದೀಗ 5 ವರ್ಷ ಕಳೆದಿದ್ದು ಅವರ ಪುಣ್ಯ ತಿಥಿ ಕೂಡ ಮಾಡಲಾಗಿದ್ದು ,ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 111 ನೇ ಎಪಿಸೋಡ್ ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಮ್ಮನ ಹೆಸರಿನಲ್ಲಿ ಗಿಡ ನಡೆವ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ.

ಪ್ರತಿಯೊಬ್ಬರಿಗೂ ಅಮ್ಮನ ಪ್ರೀತಿ ಬಹಳ ಮುಖ್ಯ. ಅಮ್ಮನ ಈ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಪರಿಸರ ದಿನಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ್ದೇವೆ. ಏಕ್ ಪೇಡ್, ಮಾ ಕೆ ನಾಮ್ ಕೆಂಪೇನ್ ಇದು ಎಂದು ಮೋದಿ ಹೇಳಿದ್ದರು .

Plant4Mother ಹ್ಯಾಷ್ ಟ್ಯಾಗ್ ಉಪಯೋಗಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂತೆಯೂ ಕರೆ ನೀಡಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಹ ಅಮ್ಮನೊಂದಿಗೆ ಗಿಡ ನೆಟ್ಟು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಷೇರ್ ಮಾಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!