ಮರಳಿ ಬಾರದ ಲೋಕಕ್ಕೆ ಅಪ್ಪು.

1939

ಬೆಂಗಳೂರು:- ರಾಜ್ ಕುಟುಂಬದ ಕುಡಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ (45) ಹೃದಯಾಘಾತದಿಂದ ಸಾವುಕಂಡಿದ್ದಾರೆ.
ಪುನಿತ್ ರಾಜ್ ಕುಮಾರ್ ರವರು 1975 ರ 17 ಮಾರ್ಚ ನಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮನವರ ಮೂರನೇ ಪುತ್ರರಾಗಿ ಜನಿಸಿದರು.

ಬಾಲ ಕಲಾವಿದನಾಗಿ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು 29 ಸಿನಿಮಾ ದಲ್ಲಿ ಬಾಲ ಕಲಾವಿದರಾಗಿ ಪಾತ್ರ ನಿರ್ವಹಿಸಿದರು. ಇವರ ಅದ್ಭುತ ನಟನೆಗೆ ಸಿಗದ ಪುರಸ್ಕಾರಗಳಿಲ್ಲ. ನಂತರ 2002 ರಲ್ಲಿ ಅಪ್ಪು ಸಿನಿಮಾದ ಮೂಲಕ ನಾಯಕನಟರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

1999 ರಲ್ಲಿ ಚಿಕ್ಕಮಗಳೂರಿನ ಅಶ್ವಿನಿಯವರನ್ನು ವರಿಸಿದ್ದು ದೃತಿ ಮತ್ತು ವಂದಿತಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಜನರು ಅಭಿಮಾನ ಪ್ರೀತಿಯಿಂದ ಅಪ್ಪು ,ಪವರ್ ಸ್ಟಾರ್ ಎಂದು ಬಿರಿದು ನೀಡಿದ್ದಾರೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ:-

ಕಂಠೀರವ ಸ್ಟೇಡಿಯಮ್ ನಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ನಾಳೆ ಒರೆಗೂ ಅಭಿಮಾನಿಗಳಿಗೆ ದರ್ಶನದ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!