BREAKING NEWS
Search

ನಮೋ 72 ನೇ ಹುಟ್ಟುಹಬ್ಬಕ್ಕೆ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿದ ಮೋದಿ ಅಭಿಮಾನಿ ಮಹೇಶ್ ವಿಕ್ರಮ ಹೆಗ್ಡೆ

577

ಕಾರವಾರ/ಬೆಂಗಳೂರು:- ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬವನ್ನು ದೇಶದೆಲ್ಲೆಡೆ ಆಚರಿಸಲಾಗಿದೆ. ಆದರೇ ಮೋದಿ ಅಭಿಮಾನಿಯೊಬ್ಬರು ದೇಶದ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಮೋ ವಿನ ಜನುಮದಿನವನ್ನು ಬಲು ವಿಶಿಷ್ಟವಾಗಿ ಆಚರಿಸಿದ್ದಾರೆ.

ಹೌದು ಮೋದಿ ಅವರ ಅಭಿಮಾನಿಯಾಗಿರುವ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ ತಮ್ಮ ವಿಕ್ರಮ ಫೌಂಡೇಶನ್ ಮೂಲಕ ಮೋದಿ ಅವರ ಜನುಮದಿನವನ್ನು ವಿಶೇಷವಾಗಿ ಆಚರಿಸಲು ಈ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ದೇಶದ ಪಾರಂಪರಿಕ ಧಾರ್ಮಿಕ ಹಿನ್ನಲೆ ಇರುವ ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಒಟ್ಟು 72 ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ, ರುಧ್ರಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ‌ ಸೇರಿದಂತೆ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಶ್ರೀಶೈಲ, ಶಿರಡಿ ಸೇರಿದಂತೆ ರಾಜ್ಯದ ಏಳು ದೇವಿ ಶಕ್ತಿ ಪೀಠಗಳಲ್ಲಿ ನಮೋ ಹೆಸರಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ. ಇನ್ನು ಸಿದ್ದಗಂಗಾ ಮಠ, ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿ ಪೂಜೆ ಜತೆಗೆ ನರೇಂದ್ರ ಮೋದಿ ಅವರ ಹೆಸರಲ್ಲಿ ಅನ್ನಸಂತರ್ಪಣೆ ಸೇವಾ ಕಾರ್ಯ ಸಹ ನಡೆಸಿದ್ದು ಬಲು ವಿಶಿಷ್ಟವಾಗಿ ಮೋದಿಯವರ ಜನ್ಮದಿನಾಚರಣೆಯನ್ನು ಆಚರಿಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!