ಸುಳ್ಳು ಸುದ್ದಿ ಬಿತ್ತರಿಸಿದ ರಾಜ್ ಟಿವಿ ಮ್ಯಾನೇಜ್ ಮೆಂಟ್ ಹಾಗು ಪತ್ರಕರ್ತರಿಗೆ ಲೀಗಲ್ ನೋಟೀಸ್ ಜಾರಿ.!

740

ಬೆಂಗಳೂರು:- ಅಧಾರ ರಹಿತ ಮಾಹಿತಿ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ವಿರುದ್ಧ ವರದಿ ಬಿತ್ತರಿಸಿದ್ದ ರಾಜ್ ಟಿವಿ ಚಾನಲ್ ಮ್ಯಾನೇಜ್ ಮೆಂಟ್ ಹಾಗು ವರದಿಗಾರರು, ಎಡಿಟರ್ ಮತ್ತು ನಿರೂಪಕರ ವಿರುದ್ಧ ಕ್ರಿಮಿನಲ್ ಡಿಫಮೇಷನ್ ಲೀಗಲ್ ನೋಟೀಸ್ ಜಾರಿಮಾಡಲಾಗಿದೆ.

ನೋಟಿಸ್ ನೀಡಿರುವ ಪ್ರತಿ.

ಬೇರೆ ಚಾನಲ್ ಗಳಿಗಿಂತ ಹೆಚ್ಚಿನ ಪ್ರಮಾಣದ ಜಾಹಿರಾತುಗಳನ್ನು ರಾಜ್ ಟಿವಿಗೆ ನೀಡಬೇಕೆಂದು ಬಿಡಿಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಗಿರೀಶ್ ಎಲ್. ಪಿ ಅವರ ಮೇಲೆ ರಾಜ್ ಟಿವಿ ವರದಿಗಾರ ಗಣೇಶ್ ಹೆಗಡೆ ಎಂಬುವವರ ಮೂಲಕ ಪದೇ ಪದೇ ಒತ್ತಡ ಹೇರಲಾಗಿತ್ತು, ಆದರೆ ಅದಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಗಿರೀಶ್ ಎಲ್ ಪಿ ಬಗ್ಗದೇ ಇದ್ದಾಗ ಸುಳ್ಳು ಆರೋಪಗಳನ್ನು ಬಿತ್ತರಿಸುವ ಪ್ರೋಮೋ ಅನ್ನು ಹರಿಬಿಡಲಾಯ್ತು ಎಂದು ಆರೋಪಿಸಲಾಗಿದೆ.

ಇದಕ್ಕೂ ಬಗ್ಗದಿದ್ದಾಗ ಅರ್ಧಗಂಟೆಗಳ ಕಾಲ ಗಿರೀಶ್ ವಿರುದ್ಧ ಸುದ್ದಿ ಬಿತ್ತರಿಸಿ, ನೈತಿಕ ಸ್ಥೈರ್ಯ ಕುಗ್ಗಿಸಲು ರಾಜ್ ಟಿವಿ ಸಂಪಾದಕ ಶ್ರೀನಿವಾಸ್ ಹಳಕಟ್ಟಿ ಮತ್ತು ವ್ಯವಸ್ಥಾಪಕ ಸಂಪಾದಕ ಶಿವರುದ್ರಪ್ಪ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಗಿರೀಶ್ ಎಲ್.ಪಿ ಅವರು ಬಿಡಿಎ ಗೆ ನೇಮಕಗೊಂಡು ಒಂದು ವರ್ಷವೇ ಕಳೆದಿದೆ, ಈಗ ಅವರ ನೇಮಕವನ್ನು ಪ್ರಶ್ನೆ ಮಾಡುತ್ತಿರುವುದು ಏಕೆ ಎಂಬ ಕೂತುಹಲ ಮೂಡುವುದು ಸಹಜ.

ಡಾ ಗಿರೀಶ್ ಎಲ್.ಪಿ ಅವರು ಬಿಡಿಎ ಗೆ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಬಂದ ಬಳಿಕ ಬಿಡಿಎ ಅಂಗಳದಲ್ಲಿ ಸದಾ ಕಾಣಸಿಗುತ್ತಿದ್ದ ನಕಲಿ ಪತ್ರಕರ್ತರು, ಬ್ಲಾಕ್ ಮೇಲ್ ಪತ್ರಕರ್ತರು ಹಾಗೂ ಆರ್ಟಿಐ ಕಾರ್ಯಕರ್ತರ ಸೋಗಿನಲ್ಲಿದ್ದ ವಂಚಕರನ್ನು ಕಾನೂನು ಪ್ರಕಾರವೇ ಬಿಡಿಎ ಅಂಗಳ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ, ನಿಜವಾದ ಪತ್ರಕರ್ತರು & ಮಾಧ್ಯಮಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಹಲವು ವರ್ಷಗಳ ಬಳಿಕ ಬಿಡಿಎ ಗೆ ಸಮರ್ಥ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಭಿಸಿದ್ದರು ಎನ್ನಬಹುದು, ಇದು ಕೆಲವರ ಕಣ್ಣನ್ನು ಕೆಂಪಾಗಿಸಿತ್ತು ಎನ್ನುತ್ತಾರೆ ಬಿಡಿಎ ಗೇಟ್ ನಲ್ಲಿ ಕೆಲಸ ನಿರ್ವಹಣೆ ಮಾಡುವ ಹೆಸರು ಹೇಳಲು ಇಚ್ಚಿಸಿದ ಪೊಲೀಸ್ ಸಿಬ್ಬಂದಿಗಳು.

ಕೆಲವು ತಿಂಗಳುಗಳ ಹಿಂದೆ ಆರ್ಟಿಐ ಕಾರ್ಯಕರ್ತರ ಸೋಗಿನಲ್ಲಿ ಬಿಎಂ ಶಿವಕುಮಾರ್ ಅಲಿಯಾಸ್ ಚಾಮುಂಡಿ ಶಿವಕುಮಾರ್ ಎಂಬ ವ್ಯಕ್ತಿ ಆರ್ಟಿಐ ಅರ್ಜಿಗಳ ಮೂಲಕ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಹಣಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಬಿಡಿಎ ಪರವಾಗಿ ಡಾ.ಗಿರೀಶ್ ಅವರೇ ಪ್ರಕರಣ ದಾಖಲಿಸಿದ್ದರು.

ಪ್ರಕರಣ ತನಿಖಾ ಹಂತದಲ್ಲಿದೆ, ಹೀಗಾಗಿ ಆರ್ಟಿಐ ಮೂಲಕ ಬಿಡಿಎ ಅಧಿಕಾರಿಗಳನ್ನು ಬೆದರಿಸುತ್ತಿದ್ದ ಚಾಮುಂಡಿ ಶಿವಕುಮಾರ್ ಅಂದಿನಿಂದ ತಲೆಮರೆಸಿಕೊಂಡಿದ್ದು,
ಆತನಿಗೆ ಬಿಡಿಎ ನಲ್ಲಿ ಪ್ರವೇಶವೇ ಇಲ್ಲದಂತಾಗಿದೆ, ಇದರಿಂದ ಕುಪಿತಗೊಂಡು ಬ್ಲಾಕ್ ಮೇಲ್ ಪತ್ರಕರ್ತರಿಗೆ ಸುಳ್ಳು ಸುದ್ಧಿಗಳನ್ನು ರವಾನಿಸುವ ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ.

ಚಾಮುಂಡಿ ಶಿವಕುಮಾರ್ ನ ಕುತಂತ್ರಕ್ಕೆ ಸಾಮಾಜಿಕ ಕಳಕಳಿಯ ಹೋರಾಟಕ್ಕೆ ಹೆಸರು ಪಡೆದಿದ್ದ ಸಾಯಿದತ್ತ ಕೂಡ ಬಲಿಯಾಗಬೇಕಾಯ್ತು. ಚಾಮುಂಡಿ ಶಿವಕುಮಾರ್ ನ ವಿರುದ್ಧವು ಕಾನೂನು ಹೋರಾಟಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿ‌ ಡಾ.ಗಿರೀಶ್ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಂದ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದಾಗಲಿ ಒಂದು ಪ್ರತಿಹೇಳಿಕೆಯನ್ನು ಪಡೆಯದೇ ಡಾ.ಗಿರೀಶ್ ಅವರು ಗೆಜೆಟೆಡ್ ಅಧಿಕಾರಿ ಅಲ್ಲ ಎಂದು, ಸಮರ್ಥ ಅಧಿಕಾರಿಯ ವಿರುದ್ಧ, ಇಲ್ಲಸಲ್ಲದ ಆರೋಪಗಳನ್ನು ಮಾಡುವ ಸುಳ್ಳುಸುದ್ದಿ ಪ್ರಸಾರ ಮಾಡಿದ್ದು ಬ್ಲಾಕ್ ಮೇಲ್ ಪತ್ರಿಕೋದ್ಯಮ ಅಲ್ಲದೇ ಮತ್ತೇನು ? ಎಂಬ ಸಂಶಯಗಳು ಓದುಗರನ್ನು ಕಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಪರ್ಕ ಅಧಿಕಾರಿ ಡಾ.ಗಿರೀಶ್ ಅವರನ್ನು ಸಂಪರ್ಕಿಸಿದರೆ, ಮಾಧ್ಯಮಗಳಿಗೆ ಈ ಸಮಯದಲ್ಲಿ ಉತ್ತರಿಸುವುದಿಲ್ಲ, ಕಾನೂನು ಪ್ರಕ್ರಿಯೆ ಮೂಲಕವೇ ಉತ್ತರಿಸುತ್ತೇನೆ, ಈ ಬಗ್ಗೆ ಅವಶ್ಯಕತೆ ಇದ್ದರೆ ನಮ್ಮ ವಕೀಲರನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!