ಶಿವಮೊಗ್ಗ: ಸಾಗರ ನಗರ ಪೊಲೀಸ್ ಠಾಣೆಯ ಸಿಪಿಐ ಅಶೋಕ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ದೂರು ನೀಡಿದ್ದಾಳೆ.
ಘಟನೆ ಏನು?
ಪ್ರಕರಣವೊಂದರ ದೂರು ಸಲ್ಲಿಸಲು ಮಹಿಳೆ ಠಾಣೆಗೆ ಬಂದಿದ್ದರು. ಈ ವೇಳೆ ಸಂತ್ರಸ್ಥ ಮಹಿಳೆಯ ಫೋನ್ ನಂಬರ್ ಪಡೆದಿದ್ದ ಸಿಪಿಐ ಅಶೋಕ್ ಕುಮಾರ್ ಪರಿಚಯ ಮಾಡಿಕೊಂಡು ಸಲುಗೆ ಬಳಸಿಕೊಂಡಿದ್ದ ಎಂದು ಮಹಿಳೆ ದೂರಿದ್ದು , ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಅಶ್ಲೀಲ ಫೋಟೋ ವೀಡಿಯೋ ಮಾಡಿ ಬೆದರಿಕೆ ಆರೋಪ!
ಮಹಿಳೆಯ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನ ಮಾಡಿಕೊಂಡು ಬ್ಲಾಕ್‍ಮೇಲ್ ಮಾಡಿದ್ದಾನೆ. ಬೆದರಿಸಿ ತಾನು ಹೇಳಿರುವ ಸ್ಥಳಕ್ಕೆ ಕರಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದಕ್ಕೆ ಕೊಲೆ ಬೆದರಿಕೆ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಘಟನೆ ಸಂಬಂಧ ಸಿಪಿಐ ಅಶೋಕ್ ವಿರುದ್ಧ ಐಪಿಸಿ ಕಲಂ 354(ಎ), 376 (ಸಿ), 417, 504, 506ರ ಅಡಿ ಪ್ರಕರಣ ದಾಖಲಾಗಿದೆ.