ಶಿರಸಿ|ವಿಚಿತ್ರ ಕರುವಿಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ಷಣೆ.

20

ಕಾವಾರ/ಶಿರಸಿ :- ಜನ್ಮಜಾತ ದೋಶದಿಂದ ಹಣೆಯಮೇಲೆ ಹೆಚ್ಚಿನ ಮಾಂಸ ಬೆಳೆದು ಸಾವು ಬದುಕಿನ ನಡುವೆ ಹೋರಾಡುತಿದ್ದ ಕರುವನ್ನು ಒಂದೂವರೆ ಘಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಕರುವನ್ನು ಬದುಕಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮತ್ತಿಘಟ್ಟದಲ್ಲಿ ನಡೆದಿದೆ. ಇಲ್ಲಿನ ಡಿ.ಆರ್.ಭಟ್ ಎಂಬುವವರ ಮನೆಯಲ್ಲಿ ಇರುವ ಗೀರ್ ಜಾತಿಯ ಹಸುವಿಗೆ ಕರು ಹುಟ್ಟಿದ್ದು ಅದರ ಮುಖದ ಮೇಲೆ ಬೃಹದಾಕಾರದ ಚರ್ಮ ಬೆಳೆದು ನಿಂತುತ್ತು.

ಇದರಿಂದ ಕರುವು ದೈನಂದಿನ ಚಟುವಟಿಕೆ ಸಹ ನಡೆಸಲಾಗದ ಸ್ಥಿತಿಯಲ್ಲಿದ್ದು ಶಿರಸಿ ನಗರದ ಸಮರ್ಪಣ ಪಶು ಆಸ್ಪತ್ರೆಯ ವೈದ್ಯರಾದ ಡಾ. ಪಿ.ಎಸ್.ಹೆಗಡೆ ಹಾಗೂ ಡಾ.ಸುಬ್ರಾ ಭಟ್ಟರವರು ಒಂದೂವರೆ ಘಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮುಖದಮೇಲೆ ಬೆಳೆದಿದ್ದ ಹೆಚ್ಚುವರಿ ಚರ್ಮವನ್ನು ತೆಗೆದು ಕರುವನ್ನು ರಕ್ಷಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!