ಕಾರವಾರ :- ರಸ್ತೆ ನಿಯಮ ಪಾಲಿಸದ ಸವಾರರಿಗೆ ಇಂದು ಯಮರಾಯನ ಶಾಕ್ ಕಾದಿತ್ತು! ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಸ್ತೆ ನಿಯಮ ಪಾಲಿಸದೇ ಹೆಲ್ಮೆಟ್ ಧರಿಸದ ಸವಾರರಿಗೆ ಯಮನೇ ಕುದ್ದು ಬಂದು ಯಮಪಾಶವನ್ನ ಹಾಕಿ ಎಳೆದೊಯ್ಯಲು ಸಿದ್ದತೆ ನಡೆಸಿದ್ದ.ಆದ್ರೆ ಪೊಲೀಸರು ಸವಾರನಿಗೆ ಹೆಲ್ಮೆಟ್ ತಂದು ನೀಡಿದಾಗ ಯಮ ಆತನನ್ನು ಬಿಟ್ಟು ಹೋಗುತ್ತಾನೆ.ಹೌದು ಜನರಲ್ಲಿ ಸಂಚಾರ ಸುರಕ್ಷತೆ ಜಾಗೃತಿಗಾಗಿ ಶಿರಸಿ ನಗರ ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದರು.
ವೀಡಿಯೋ ನೋಡಿ:-
ಇನ್ನು ಕಾರವಾರದಲ್ಲಿ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸುವ ಬದಲು ಗುಲಾಬಿ ಹೂ ನೀಡಿ ನಿಯಮ ಉಲ್ಲಂಘಿಸದಂತೆ ಪ್ರತಿಜ್ಞೆ ಮಾಡಿಸಿ ಜಾಗೃತಿ ಮೂಡಿಸಲಾಯಿತು.
