ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸ್ ಶರಾವತಿ ಹಿನ್ನೀರಿಗೆ ಇಳಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ (sagar)ಸಿಗಂಧೂರು ಸಮೀಪದ ಹೊಳೆಬಾಗಿಲಿನಲ್ಲಿ ನಡೆದಿದೆ.
ಹೊಳೆಬಾಗಿಲು ಕಡೆಯಿಂದ ಸಿಗಂದೂರು ಕಡೆ ಹೊರಟಿದ್ದ ಖಾಸಗಿ ಬಸ್, ಶರಾವತಿ ಹಿನ್ನೀರಿನ ಬಳಿ ಲಾಂಚ್ ಗಾಗಿ ಬಸ್ ನಿಲ್ಲಿಸಿಕೊಂಡು ಕಾಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಇಳಿಜಾರಿನಲ್ಲಿ ಬಸ್ ನಿಲ್ಲಿಸಿದ್ದು ಬಸ್ ನ ಬ್ರೇಕ್ ಸಮಸ್ಯೆಯಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಿನ್ನೀರಿಗೆ ಇಳಿದಿದೆ. ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಬಳಿಕ ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಅನ್ನ ಮೇಲಕ್ಕೆತ್ತಲಾಗಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ.