BREAKING NEWS
Search
Padnaja rao sandalwood actors

ಚಿತ್ರನಟಿ ಪದ್ಮಜಾ ಬಂಧನಕ್ಕೆ ಮಂಗಳೂರು ನ್ಯಾಯಾಲಯದಿಂದ ವಾರೆಂಟ್ ಜಾರಿ!

1902

ಮಂಗಳೂರು: ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಲಾಗಿದೆ.

ಮಂಗಳೂರಿನ ಜೆ.ಎಂ.ಎಫ್‌.ಸಿ ಐದನೇ ನ್ಯಾಯಾಲಯ ಈ ವಾರೆಂಟ್ ಹೊರಡಿಸಿದೆ.

ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‌ನಿಂದ ಸುಮಾರು 41 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು.

ಸಾಲ ನೀಡದೆ ವಂಚಿಸಿದ್ದರು ಎನ್ನಲಾಗಿದ್ದು, ಈ ಸಾಲದ ಭದ್ರತೆಗಾಗಿ 40 ಲಕ್ಷ ರೂಪಾಯಿಗಳ ಚೆಕ್‌ ಅನ್ನು ನೀಡಿದ್ದರು.

ಇದನ್ನು ಬ್ಯಾಂಕ್ ಗೆ ಹಾಕಿದಾಗ ಖಾತೆಯಲ್ಲಿ ಹಣವಿರದ ಕಾರಣ ಚೆಕ್ ಬೌನ್ಸ್ ಆಗಿತ್ತು.

ಶಟ್ಟಿಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆದರೇ ನ್ಯಾಯಾಲಯ ಸಮನ್ಸ್ ನೀಡಿದರೂ ಹಾಜುರಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಪದ್ಮಜಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!