ಕಾರವಾರ:- ಉತ್ತರಕನ್ನಡ ಜಿಲ್ಲೆಯ ಕಾರವಾರದ ಬಡ ಜನರಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಗಿರಿಜಾಬಾಯಿ ಸೈಲ್ ಮೆಮೋರಿಯಲ್ ಟ್ರಸ್ಟ್ ಮುಂದಾಗಿದೆ. ಕೆಲವು ದಾನಿಗಳ ಸಹಕಾರದಿಂದ ಒಟ್ಟು 21 ಸಾವಿರ ಲಸಿಕೆಯನ್ನ ಉಚಿತವಾಗಿ ನೀಡಲು ಯೋಜನೆ ರೂಪಿಸಿದ್ದು, ಈಗಾಗಲೇ ಮೂರು ಸಾವಿರ ಲಸಿಕೆಯನ್ನ ಇಲ್ಲಿನ ಶೆಟ್ಟಿ ಐ ಕ್ಲಿನಿಕ್ ನಲ್ಲಿ ನೀಡಲು ನಿರ್ಧರಿಸಿದೆ.
ಜೂನ್ 20ರಂದು ಲಸಿಕೆ ಆರಂಭವಾಗಲಿದ್ದು ನಾಳೆಯಿಂದ ಲಸಿಕೆಗಾಗಿ ಕೋವಿನ್ ಆ್ಯಪ್ ಮೂಲಕ ನೋಂದಣೆ ಮಾಡಿಕೊಳ್ಳಬೇಕೆಂದು ಟ್ರಸ್ಟ್ ಅಧ್ಯಕ್ಷ ಸತೀಶ್ ಸೈಲ್ ಹೇಳಿದ್ದಾರೆ. ಇಂದು ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು
ಈಗಾಗಲೇ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ.
ಆದ್ರೆ ಬಡಜನರಿಗೆ ಅನುಕೂಲವಾಗಲೆಂದು ಬೇರಬೇರೆ ಕಂಪನಿಗಳ ಸಿಎಸ್ಆರ್ ಫಂಡ್ ಮೂಲಕ ಬಡಜನರಿಗೆ ಲಸಿಕೆ ನೀಡಲು ವಿನಂತಿಸಿದ್ದರಿಂದ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಅವರು ಹೇಳಿದ್ದಾರೆ.
ಸದ್ಯ 20 ಲಕ್ಷ ಮೌಲ್ಯದ 21000 ಲಸಿಕೆಯನ್ನು ನೀಡಲು ಸಿದ್ದವಾಗಿದ್ದೇವೆ. ಹಲವರಿಗೆ ಉಚಿತವಾಗಿ ಸಿಗುವ ಲಸಿಕೆ ಸಹ ಸಿಗದೇ ತೊಂದರೆ ಅನುಭವಿಸುತಿದ್ದಾರೆ. ಅಂತವರು ನೊಂದಣಿ ಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು ಎಂದಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಶಟ್ಟಿ ಐ ಹಾಸ್ಪೆಟಲ್ ನ ಮ್ಯಾನೇಜರ್ ಸತೀಶ್ , ಕಾಂಗ್ರೆಸ್ ಪಕ್ಷದ ಮುಖಂಡ ಶಂಭು ಶಟ್ಟಿ ಮುಂತಾದವರು ಉಪಸ್ಥಿತರಿದ್ದರು.