ಶನಿವಾರದ ದಿನ ಭವಿಷ್ಯ.

707

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ಏಕಾದಶಿ, ಶನಿವಾರ,
ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರ
ರಾಹುಕಾಲ: 09:38 ರಿಂದ 11:04
ಗುಳಿಕಕಾಲ: 06:46 ರಿಂದ 8 :12
ಯಮಗಂಡಕಾಲ: 01:56 ರಿಂದ 03:22

ಮೇಷರಾಶಿ
ಈ ದಿನ ಕೆಲಸಗಳು ಹೆಚ್ಚಾಗಲಿದ್ದು ಆಯಾಸ ದಣಿವು ಇರಲಿದೆ, ಸ್ಥಿರಾಸ್ತಿ ನಷ್ಟ, ಆರೋಗ್ಯ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಗತ್ಯ ವಸ್ತುಗಳ ಖರೀದಿ,ಕುಟುಂಬ ಸೌಖ್ಯ.

ವೃಷಭರಾಶಿ
ಈ ದಿನ ಮಿಶ್ರ ಫಲ ,ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ, ಮಿತ್ರರಿಂದ ಆಕಸ್ಮಿಕ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಬಂಧು ಬಾಂಧವರಿಂದ ಅನುಕೂಲ, ದಿನಾಂತ್ಯಕ್ಕೆ ಶುಭ ಸಮಾಚಾರ.

ಮಿಥುನರಾಶಿ
ದೇವರ ದರ್ಶನ, ಅನಾರೋಗ್ಯದಿಂದ ವ್ಯವಹಾರದಲ್ಲಿ ತೊಡಕು, ಆತುರದಿಂದ ಅಪಘಾತಗಳು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸಾಂಸಾರಿಕವಾಗಿ ನೆಮ್ಮದಿಯ ದಿನ.

ಕಟಕರಾಶಿ
ದೂರ ಪ್ರಯಾಣ, ಪ್ರಯಾಣದಿಂದ ಅನುಕೂಲಕರ, ಉದ್ಯೋಗ ಗೃಹ ಮತ್ತು ಸ್ಥಳ ಬದಲಾವಣೆಗೆ ಸಕಾಲ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಸಿಂಹರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಮಕ್ಕಳಿಂದ ಖರ್ಚು, ಪ್ರತಿಷ್ಠೆ ಗೌರವ ಹೆಸರಿಗೆ ಕುಂದು ಬರುವುದು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ ಹೆಚ್ಚು, ಎಚ್ಚರಿಕೆಯಿಂದ ಇರಿ.

ಕನ್ಯಾರಾಶಿ
ಉದ್ಯೋಗಿಗಳಿಗೆ ಅನುಕೂಲ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ ಅಧಿಕ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಬುದ್ಧಿವಂತಿಕೆ ಬೇಡ, ದಿನಾಂತ್ಯಕ್ಕೆ ಶುಭ ಸಾಮಾಚಾರವನ್ನು ಕೇಳುವಿರಿ.

ತುಲಾರಾಶಿ
ಮಾನಸಿಕ ಚಂಚಲತೆ, ಯಾವುದೇ ಕಾರಣಕ್ಕೂ ಉದ್ಯೋಗ ಬದಲಾವಣೆ ಬೇಡ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಖರ್ಚುಗಳ ಮೇಲೆ ಹಿಡಿತವಿರಲಿ, ಸ್ವತಃ ವ್ಯಾಪಾರಿಗಳಿಗೆ ಧನಲಾಭ.

ವೃಶ್ಚಿಕರಾಶಿ
ಮನೆಯಲ್ಲಿ ನೆಮ್ಮದಿಯ ವಾತಾವರಣ, ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸೂಕ್ತ ಕಾಲ, ಆರೋಗ್ಯ ಸಮಸ್ಯೆಯಿಂದ ಭಾದೆ, ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ, ಹೊಸ ದಾರಿಗಳು ಗೋಚರಕ್ಕೆ ಬರಲಿದೆ.

ಧನಸುರಾಶಿ
ದೌರ್ಬಲ್ಯಗಳಿಂದಲೇ ಸಮಸ್ಯೆಗೆ ಸಿಲುಕುವಿರಿ, ಕಲಹ ಮತ್ತು ಮನಸ್ತಾಪಗಳು, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಅತಿಯಾದ ಉದ್ಯೋಗ ಒತ್ತಡ, ಜವಾಬ್ದಾರಿಗಳಿಂದ ಒತ್ತಡ, ಹೊಸ ವ್ಯವಹಾರದಲ್ಲಿ ಹೂಡಿಕೆಗೆ ಸಕಾಲ.

ಮಕರರಾಶಿ
ರಾಜಕಾರಣಿಗಳಿಗೆ ಉತ್ತಮ ದಿನ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಬುದ್ಧಿಹೀನರಾಗುವಿರಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕುಂಭರಾಶಿ
ಭವಿಷ್ಯದಲ್ಲಿ ಉತ್ತಮ ದಿನಗಳು ಗೋಚರಕ್ಕೆ ಬರಲಿದೆ, ಜಾಣತನದಿಂದ ವ್ಯವಹಾರ ಮಾಡಿದ್ರೆ ಯಶಸ್ಸು, ಸಾಲಗಾರರಿಂದ ಮುಕ್ತಿ, ಕುಟುಂಬದಲ್ಲಿ ಅಂತಃಕಲಹಗಳು, ಹಿರಿಯರಿಗೆ ನೋವುಂಟು ಮಾಡುವಿರಿ, ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ,

ಮೀನರಾಶಿ
ಕುಟುಂಬದಲ್ಲಿ ನೆಮ್ಮದಿ ಇರುವುದು,ನಿಮ್ಮ ಕೆಲಸಗಳು ಕೈ ಗೂಡುವುದು,ಆಗಾಗ ಕಲಹ, ಅಧಿಕಾರಿಗಳಿಂದ ಅನುಕೂಲ, ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ, ದಿನಾಂತ್ಯಕ್ಕೆ ಧನಲಾಭ,ಈ ದಿನ ಶುಭ ಫಲ ಹೆಚ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!