ಲಾಕ್ ಡೌನ್ ನಲ್ಲಿ ಅಕ್ಕನ ಮನೆಗೆ ಸಮಯ ಕಳೆಯಲು ಬಂದ ಯುವಕ-ಸೆಲ್ಫಿ ಕ್ರೇಜ್ ಗೆ ಸಾವು

649

ಕಾರವಾರ :- ಲಾಕ್ ಡೌನ್ ಆದ್ದರಿಂದ ಮನೆಯಲ್ಲಿ ಸಮಯ ಕಳೆಯಲು ಅಕ್ಕನ ಮನೆಗೆ ಬಂದು ಸೆಲ್ಪೆ ಕ್ರೇಜ್ ಗೆ ಸಮುದ್ರದಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವು ಕಂಡ ಯುವಕನಾಗಿದ್ದು, ತನ್ನೂರಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕನ ಮನೆಗೆ ಬಂದಿದ್ದ ಈತ ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಸಮುದ್ರದ ಭಾಗಕ್ಕೆ ತೆರಳಿದ್ದು ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಸಮುದ್ರಕ್ಕೆ ಇಳಿದಿದ್ದಾನೆ.

ಸೆಲ್ಫಿ ಕ್ರೇಜ್ ನಲ್ಲಿ ಕಾಲುಜಾರಿ ಸಮುದ್ರದಲ್ಲಿ ಬಿದ್ದ ಈತ ಕೊಚ್ಚಿಹೋಗಿದ್ದು ಕುಮಟಾದ ಅಳವೆ ದಂಡೆಯಲ್ಲಿ ಶವ ಪತ್ತೆಯಾಗಿದೆ. ಘಟನೆ ಸಂಬಂಧ
ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!