ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 384 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಶಿವಮೊಗ್ಗ ದಲ್ಲಿ ಬರೋಬ್ಬರಿ 145 ಜನರಿಗೆ ಕರೊನಾ ಪಾಸಿಟಿವ್ ವರದಿಯಾಗಿದ್ದು ಎರಡನೇ ಸ್ಥಾನವನ್ನು ಭದ್ರಾವತಿ ತೆಗೆದುಕೊಂಡಿದೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದ್ದು, ಯೋಜನೆಯಡಿ ಇದುವರೆಗೆ ಹೆಸರು ನೋಂದಾಯಿಸದ ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಯೋಜನೆಯಡಿ ರೆಫರಲ್ ಮೂಲಕ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ. ಸರ್ಕಾರಿ ಕೋಟಾದ ರೋಗಿಗಳಿಗೆ ರೆಮ್ಡಿಸಿವಿರ್ ಇಂಜೆಕ್ಷನ್ ಉಚಿತವಾಗಿ ಒದಗಿಸಲಾಗುತ್ತದೆ. ಒಂದೊಮ್ಮೆ ಕೋವಿಡ್ ರೋಗಿಗಳು ತಮ್ಮ ಇಚ್ಚಾನುಸಾರ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಲ್ಲಿ ಸರ್ಕಾರ ನಿಗದಿಪಡಿಸಿರುವ ಈ ಕೆಳಕಂಡ ಮೊತ್ತವನ್ನು ರೋಗಿಗಳೇ ನೇರವಾಗಿ ಭರಿಸಬೇಕಾಗುತ್ತದೆ. ಜನರಲ್ ವಾರ್ಡ್ 10ಸಾವಿರ ರೂ, ಎಚ್‍ಡಿಯು 12ಸಾವಿರ ರೂ, ಐಸೊಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ 15ಸಾವಿರ ರೂ, ವಿದ್ ವೆಂಟಿಲೇಟರ್ ರೂ. 25ಸಾವಿರ ರೂ. ದರಗಳ ಮಿತಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುರುಡೇಶ್ವರದ ಸಮುದ್ರ ತೀರದಲ್ಲಿ ಸಿಕ್ತು ಕೋಟಿ ರೂ ಮೌಲ್ಯದ ತಿಮಿಂಗಿಲ ವಾಂತಿ! ವಿಡಿಯೋ ನೋಡಿ:-
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರೆ ಅಥವಾ ಚಿಕಿತ್ಸೆ ನೀಡಲು ವಿಳಂಬ ಮಾಡಿದರೆ ಅಥವಾ ಸರ್ಕಾರ ನಿಗದಿ ಮಾಡಿರುವ ದರಗಳಿಗಿಂತ ಹೆಚ್ಚಿನ ದರ ವಿಧಿಸಿದರೆ 1800 425 8330 ಗೆ ಹಾಗೂ 1912 ಕರೆ ಮಾಡಿ ದೂರು ನೀಡಬಹುದು. 080-22536200 ಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಕರೋನಾ ಇದ್ರೂ ಶಿವಮೊಗ್ಗ ದಲ್ಲಿ ರಸ್ತೆಯಲ್ಲಿ ಓಡಾಡಿದ ವ್ಯಕ್ತಿ ವಿಡಿಯೋ ನೋಡಲು ಈ ಕೆಳಗಿನ ನಮ್ಮ ಫೇಸ್ ಬುಕ್ ಫೇಜ್ ಲಿಂಕ್ ಗೆ ಕ್ಲಿಕ್ ಮಾಡಿ ಲೈಕ್ ಮಾಡಿ:-