BREAKING NEWS
Search

ಶಿವಮೊಗ್ಗ:ಬ್ರಿಟನ್ ರೂಪಾಂತರ ಕರೋನಾ ವೈರೆಸ್ ಪತ್ತೆ!

589

ಶಿವಮೊಗ್ಗ :- ಬ್ರಿಟನ್ ನಿಂದ ತಾಯಿಯ ಕಾರ್ಯ ಮಾಡಲು ಶಿವಮೊಗ್ಗಕ್ಕೆ ಮರಳಿದ್ದ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಮೂವರಲ್ಲೂ ಸೋಂಕು ಕಾಣಿಸಿಕೊಂಡಿದೆ.

ನಾಲ್ಕು ಮಂದಿಗೆ ಸೋಂಕು ದೃಢ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರ ಕರೋನ ವೈರಸ್ ಪತ್ತೆಯಾಗಿದೆ.

ಇವರೊಂದಿಗೆ ಏಳು ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಅವರಿಗೂ ಕರೋನ ಪರೀಕ್ಷೆ ನಡೆಸಲಾಗಿದೆ. ಏಳು ಮಂದಿಯ ಪೈಕಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆದರೆ ಇದು ರೂಪಾಂತರಿ ವೈರಸ್ ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.
ವಿದೇಶದಿಂದ ಹಿಂತಿರುಗಿದ ದಿನವೇ ಇವರನ್ನು ಪತ್ತೆ ಹಚ್ಚಿ, ಐಸೊಲೇಷನ್ ಮಾಡಿದ್ದರಿಂದ ಹೆಚ್ಚು ಜನರೊಂದಿಗೆ ಸಂಪರ್ಕ ಹೊಂದಿಲ್ಲ.ಈ ಕುರಿತು
ಕೇಂದ್ರಕ್ಕೂ ಸ್ಯಾಂಪಲ್ ಕಳಿಸಲಾಗಿತ್ತು. ಇದಲ್ಲದೇ
ರೂಪಾಂತರಿ ವೈರಸ್ ಪತ್ತೆಗೆ ಬೆಂಗಳೂರಿನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆ ಬಳಿಕ ಸ್ಯಾಂಪಲ್‍ಗಳನ್ನು ಕೇಂದ್ರಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ನಾಲ್ಕು ಮಂದಿಗೆ ರೂಪಾಂತರಿ ಕರೋನ ವೈರಸ್ ತಗುಲಿದೆ ಎಂದು ದೃಢಪಟ್ಟಿದೆ ಎಂದು ಸಚಿವ ಡಾ.ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!