ತೀರ್ಥಹಳ್ಳಿಯಲ್ಲಿ CM|ಮಲೆನಾಡಿಗರ ಸಮಸ್ಯೆಗೆ ಹೇಳಿದ್ದೇನು? ವಿವರ ನೋಡಿ.

35

ಶಿವಮೊಗ್ಗ :-60 ವರ್ಷದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ. ಆದರೆ ನನಗೆ ಬೇಸರವಾಗುತ್ತಿರುವುದೇನು ಎಂದರೆ ಒಂದೇ ವಿಷಯವನ್ನ ಎಷ್ಟು ವರ್ಷದವರೆಗೆ ಲಾಭ ಪಡೆಯುತ್ತೀರಿ ಎಂದು ಕಾಂಗ್ರೆಸ್ ಹೆಸರುಹೇಳದೆ ಮುಖ್ಯಮಂತ್ರಿ ಬಸವರಾಕ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಅವರು ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ನೂತನ ಕಚೇರಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿ, 24 ಸಾವಿರ ಎಕರೆ ಭೂಮಿಯ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಜೊತೆಗೆ 9 ಸಾವಿರ ಎಕರೆ ಭೂಮಿಯ ಸಮಸ್ಯೆಯನ್ನ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಮೂರನೇ ವಾರದಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಲು ಸೂಚಿಸಿದ್ದೇನೆ. ಹೈಕೋರ್ಟ್ ಆದೇಶದ ಪ್ರಕಾರ 9 ಸಾವಿರ ಎಕರೆ ಭೂಮಿಯ ಡಿನೋಡಿಫಿಕೇಶನ್ ಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲೆನಾಡಿನ ಸಮಗ್ರ ಸಮಸ್ಯೆ ಬಗೆಹರಿಸಲು ಬಿಎಸ್ ವೈ ನನಗೆ ತಿಳಿಸಿದ್ದಾರೆ. ಬಿಎಸ್ ವೈ ಹೇಳಿದಂತೆ ಮಲೆನಾಡಿನ ಅರಣ್ಯ ರೈತರ ಸಮಸ್ಯೆ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಆದರೆ 60 ವರ್ಷದ ವರೆಗೆ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ ಎಂದರು.

ಮಲೆನಾಡಿನ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿಕೊಂಡು ಎಷ್ಟು ವರ್ಷದ ವರೆಗೆ ಲಾಭ ಪಡೆಯುತ್ತಾರೆ ಎಂದು ಕಾಂಗ್ರೆಸ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಎಲೆಚುಕ್ಕೆ ರೋಗ CM ರಿಂದ ಕುದ್ದು ಪರಿಶೀಲನೆ.

ಎಲೆಚುಕ್ಕಿ ರೋಗ ಹಿನ್ನಲೆಯಲ್ಲಿ ಅಡಿಕೆ ತೋಟಗಳಸಮಗ್ರ ನಿರ್ವಾಹಣೆ ಬಗ್ಗೆ ವರದಿಯಾಗಿದೆ. ವರದಿ ಬಂದಮೇಲೆ ಸರ್ಕಾರ ಏನು ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದರು( ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ)

ಅವರು ತೀರ್ಥಹಳ್ಳಿಯ ಕೈಮರ ಗ್ರಾಮಕ್ಕೆ ಭೇಟಿ ನೀಡಿ ಎಲೆಚುಕ್ಕಿ ರೋಗದ ಬಗ್ಗೆ ಪರಿಶೀಲನೆ ನಡೆಸಿದರು. 42 ಸಾವಿರ ಹೆಕ್ಟೇರ್ ಅಡಿಕೆ ಜಮೀನು ಎಲೆಚುಕ್ಕಿ ರೋಗಕ್ಕೆ ಬಾಧೆಯಾಗಿದೆ.

ವರದಿ ಬಂದ ಮೇಲೆ ಪರಿಹಾರ ನೀಡಲಾಗುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಎಲೆಚುಕ್ಕಿರೋಗಕ್ಕೆ ಲಸಿಕೆ ನೀಡಲಾಗುದು. ಅರಣ್ಯ ಒತ್ತುವರಿ ಬಗ್ಗೆಯೂ ಕ್ರಮಕೈಗೊಳ್ಳಲಾಗುವುದು. ಅಡಿಕೆ ಬೆಳೆಗಾರರಂತೆ ಬಿಜೆಪಿ ಸರ್ಕಾರ ಯಾವಾಗಲೂ ನಿಲ್ಲಲಿದೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!