BREAKING NEWS
Search

ಸಿಗಂದೂರು ದೇವಾಲಯ ವಿವಾದ:ಜಿಲ್ಲಾಧಿಕಾರಿಗೆ ಅನುಷ್ಠಾನ ವರದಿ ಸಲ್ಲಿಸಲು ನ್ಯಾಯಾಲಯ ಸೂಚನೆ!

674

ಶಿವಮೊಗ್ಗ :-ಸಿಗಂದೂರು ಚೌಡೇಶ್ವರಿ ದೇವಾಲಯವನ್ನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು ಹಾಗೂ ದೇವಸ್ಥಾನವನ್ನ ಸರ್ಕಾರಕ್ಕೆ ವಹಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಉಚ್ಚನ್ಯಾಯಲಯದ ಮುಖ್ಯನ್ಯಾಧೀಶರಾದ ಓಕಾ ಹಾಗೂ ವಿಶ್ವನಾಥ್ ರವರನ್ನೊಳಗೊಂಡ ಪೀಠ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮೂರುವಾರದ ಒಳಗೆ ಅನುಷ್ಠಾನ ವರದಿ ಸಲ್ಲಿಸಬೇಕು ಹಾಗೂ ಕಟ್ಟಡದ ಕೆಲಸ ನಿಲ್ಲಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ.

ಅರಣ್ಯ ಒತ್ತುವರಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸುವ ಕುರಿತು ವರದಿ ಕೇಳಲಾಗಿತ್ತು. ಈ ವರದಿಯನ್ನ ಅನುಷ್ಠಾನದ ಬಗ್ಗೆ ಮೂರುವಾರದೊಳಗೆ ವರದಿ ಸಲ್ಲಿಸಬೇಕು ಹಾಗೂ ಅಕ್ರಮ ಕಟ್ಟಡವನ್ನ ಸ್ಥಗಿತಗೊಳಿಸಿರುವ ಬಗ್ಗೆ ಸಲ್ಲಿಸಿರುವ ವರದಿಯ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ.

ಈ ಕುರಿತು ತುಮರಿಯ ಲಕ್ಷ್ಮೀನಾರಾಯಣ ಹಾಗೂ ಇತರ ಮೂವರು ಚೌಡೇಶ್ವರಿ ದೇವಾಲಯವನ್ನ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಹಾಗೂ ದೇವಾಲಯದಲ್ಲಿ ಪಾರ್ದರ್ಶಕತೆಯ ಕೊರತೆ ಇದೆ ಎಂದು ಅರ್ಜಿಸಲ್ಲಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!