BREAKING NEWS
Search

ಭಟ್ಕಳದ ನರ್ಸಿಂಗ್ ವಿದ್ಯಾರ್ಥಿನಿಗೆ ವೇಲ್ ಬಿಗಿದು ಕೊಲೆ ಮಾಡಿದ ಪಾಗಲ್ ಪ್ರೇಮಿ

3685

ಶಿವಮೊಗ್ಗ:- ಪ್ರೀತಿಸಲು ನಿರಾಕರಿಸಿದ್ದ ಯುವತಿಯನ್ನು ವೇಲ್ ಬಿಗಿದು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

ಶಿವಮೂರ್ತಿ ಎಂಬುವವನು ಕೊಲೆ ಮಾಡಿದವನಾಗಿದ್ದು, ಭಟ್ಕಳದ ಕವಿತಾ ಕೊಲೆಯಾದ ಯುವತಿಯಾಗಿದ್ದಾಳೆ.

ಕವಿತಾ ನಂಜಪ್ಪ ಲೈಫ್ ಕೇರ್ ನಲ್ಲಿ ನರ್ಸಿಂಗ್ ಓದುತಿದ್ದ ವಿದ್ಯಾರ್ಥಿನಿಯಾಗಿದ್ದು ಈಕೆಯ ಸ್ನೇಹಿತ ಶಿವಮೂರ್ತಿ ತನ್ನೊಂದಿಗೆ ನೆರಲಿಗೆ ಕಳಸೆ ಗ್ರಾಮದ ಹೊಸಕೆರೆ ಬಳಿಯ ಕಾಡಿಗೆ ಕರೆದುಕೊಂಡುಹೋಗಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಈಗೆ ಆತನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಆಕೆಯ ವೇಲ್ ನನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾನೂ ಸಹ ವಿಶ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತಿದ್ದಾನೆ.

ಈಕೆಯ ಶವವು ನಿನ್ನೆ ದಿನ ಹೊಸಕೆರೆಯಲ್ಲಿ ಪತ್ತೆಯಾಗಿತ್ತು. ಪೋಷಕರು ತುಂಗಾನಗರ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ನೀಡಿದ್ದರು. ಪ್ರೀತಿಯೇ ಈ ಕೆಯ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!