BREAKING NEWS
Search

ಸಾಗರ,ತುಮರಿಯಲ್ಲಿ ಮನೆ ಕಳ್ಳತನ ಮಾಡಿದ ಇಬ್ಬರು ಕಳ್ಳರ ಬಂಧನ

842

ಸಾಗರ:- ಹಲವು ತಿಂಗಳಿಂದ ಸಾಗರ,ತುಮರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳ್ಳತನ ಮಾಡುತಿದ್ದ ಮನೆಕಳ್ಳರನ್ನು ಸಾಗರ ಗ್ರಾಮಾಂತರ ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರ ನಗರ, ತುಮರಿ ಹಾಗೂ ಆನಂದ ಪುರದಲ್ಲಿ 9 ಕಡೆ ಮನೆಗಳ್ಳತನ ಮತ್ತು ಬೈಕ್ ಕಳವು ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ಜಿಲ್ಲರಕ್ಷಣಾಧಿಕಾರಿ ಡಾ.ಹೆಚ್.ಟಿ.ಶೇಖರ್ ಹಾಗೂ ಸಾಗರದ ಪೊಲೀಸ್ ಉಪಾಧೀಕ್ಷಕ ವಿನಾಯಕ ಶೆಟಗೇರಿ ಅವರ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪಿಎಸ್ಐ ಭರತ್ ಕುಮಾರ್ ಡಿ.ಆರ್. ಸಿಬ್ಬಂದಿಗಳಾದ ಶೇಖ್ ಫೈರೋಜ್, ಸಂತೋಷ್ ನಾಯ್ಕ್, ಹಜರತ್ ಅಲಿ, ಅಶೋಕ್, ರವಿ ಕುಮಾರ್, ಕಾಳನಾಯ್ಕ್ ಲಕ್ಷ್ಮಣ ಇವರುಗಳ ತಂಡವೊಂದನ್ನ ರಚಿಸಲಾಗಿತ್ತು.

ಕಾರ್ಯಾಚರಣೆ ನಡೆಸಿದ ತಂಡ ಶಿವಮೊಗ್ಗ ಅಶೋಕ ನಗರದ ನಿವಾಸಿ ನದೀಂ ಯಾನೆ ನದ್ದು (26), ಇಲಿಯಾಜ್ ಯಾನೆ ಇಲ್ಲು ಇವರನ್ನ ಬಂಧಿಸಿದ್ದಾರೆ. ಬಂಧಿತರಿಂದ 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ರೂ.ವಿನ ಬೈಕ್ 20 ಸಾವಿರ ರೂ.ವಿನ ಟಿ.ವಿಎಸ್ ಮೊಪೆಡ್ ನ್ನ ವಶಕ್ಕೆ ಪಡೆಯಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!