ಶಿವಮೊಗ್ಗ ಎರಡು ದಿನ ಕರ್ಫ್ಯೂ ಜಾರಿ- ಹತ್ಯೆ ಆರೋಪದಡಿ ಇಬ್ಬರ ಬಂಧನ

1105

ಶಿವಮೊಗ್ಗ :- ಶಿವಮೊಗ್ಗ ನಗರದ ಕುಂಬಾರ ಬೀದಿ ನಿವಾಸಿ ಭಜರಂಗದಳದ ಕಾರ್ಯಕರ್ತನಾದ ಹರ್ಷ ಸೀಗೆಹಟ್ಟಿ, ಶಿವಮೊಗ್ಗಈತನು ದಿನಾಂಕಃ20-02-2022 ರಂದು ರಾತ್ರಿ ಹೋಟೆಲ್‌ ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆ ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಕುರಿತು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0077/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದ ವಿಶೇಷ ತನಿಖಾ ತಂಡವು ದಿನಾಂಕಃ- 21-02-2022 ರಂದು ಸದರಿ ಪ್ರಕರಣದ ಆರೋಪಿತರಾದ ಖಾಸಿಫ್‌, 30 ವರ್ಷ, ಬುದ್ಧಾನಗರ, ಶಿವಮೊಗ್ಗ ಟೌನ್‌ ಮತ್ತು ಸೈಯ್ಯದ್‌ ನಧೀಂ, 20 ವರ್ಷ, ಜೆಪಿ ನಗರ, ಶಿವಮೊಗ್ಗ ಟೌನ್ ಎಂಬುವವರನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಳ್ಳಲಾಗಿದೆ.

ನಗರದಲ್ಲಿ ನೆಡೆದ ಗಲಭೆ ದೃಶ್ಯಗಳ:-

ಹತ್ಯೆಗೊಳಗಾದ ಯುವಕನ ಕುಟುಂಬ.
ಹಲ್ಲೆಗೊಳಗಾದ ಪತ್ರಿಕಾ ಛಾಯಾಗ್ರಾಹಕರು.

ಶಿವಮೊಗ್ಗದಲ್ಲಿ ಎರಡು ದಿನ ಕರ್ಫ್ಯೂ ಜಾರಿ.

ಶಿವಮೊಗ್ಗ ನಗರದಲ್ಲಿ ಜರುಗಿದ ಕೋಮು ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ದಿನಾಂಕಃ- 23-02-2022 ರ ರಾತ್ರಿ 09-00 ಗಂಟೆಯ ವರೆಗೆ CRPC ಕಲಂ 144 ರೀತ್ಯಾ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ ಮತ್ತು ದಿನಾಂಕಃ22-02-2022 ರಂದು ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಶಿವಮೊಗ್ಗ ನಗರದಾದ್ಯಾಂತ ಬುಧವಾರ ಮುಂಜಾನೆ ವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!