ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಭಾಗದಲ್ಲಿ ಭೂಮಿ ಕಂಪಿಸಿ ಬಾಂಬ್ ಸ್ಪೋಟಿಸಿದ ಅನುಭವವಾಗಿದೆ. ಶಿವಮೊಗ್ಗ ನಗರ,ಸಾಗರ,ಶಿಕಾರಿಪುರ,ಭದ್ರಾವತಿ,ತೀರ್ಥಹಳ್ಳಿ ಭಾಗದ ಹಲವು ಭಾಗದಲ್ಲಿ ಇಂದು 10:20 ರ ರಾತ್ರಿ ವೇಳೆ ಬಾಂಬ್ ಸಿಡಿದಂತೆ ಸದ್ದು ಕೇಳಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.
ಹಲವು ಭಾಗದಲ್ಲಿ ಭೂಮಿ ಕಂಪಿಸದಿದ್ದರೂ ಬಾಂಬ್ ಸಿಡಿದಂತೆ ಸದ್ದು ಕೇಳಿದೆ. ಬಲ್ಲ ಮೂಲಗಳ ಪ್ರಕಾರ ಭೂಕಂಪನ ಅಲ್ಲ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಸ್ಥಳೀಯ ಆಡಳಿತದಿಂದ ಮಾಹಿತಿ ಬರಬೇಕಿದೆ.
ಹಲವು ವರ್ಷಗಳ ಹಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಭೂಕಂಪನವಾಗಿತ್ತು. ಆದರೇ ಇಂದು ಕಂಪನಕ್ಕಿಂತ ಶಬ್ದ ಹೆಚ್ಚು ಕೇಳಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇನ್ನು ಕೊಪ್ಪ ಭಾಗದಲ್ಲಿ ಸಹ ಈ ಶಬ್ದ ಕೇಳಿ ಬಂದಿದ್ದು ಅಧಿಕೃತವಾಗಿ ಮಾಹಿತಿ ಹೊರಬರಬೇಕಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂ ಕಂಪನದ ಅನುಭವ!


ವೀಡಿಯೋ ನೋಡಿ:-
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮ ಸೇರಿದಂತೆ ಹಲವು ಕಡೆ ಭೂಮಿ ಕಂಪಿಸಿದ್ದು ದೊಡ್ಡ ಶಬ್ದ ಬರುವ ಮೂಲಕ ಜನರನ್ನು ಬೆಚ್ಚಿ ಬೀಳಿಸಿದೆ. ಸಿದ್ದಾಪುರ ,ತಾಳಗುಪ್ಪ,ಹೊನ್ನಾವರ ಗೇರುಸೊಪ್ಪ ಭಾಗದಲ್ಲಿ ಕಂಪನ ಆಗಿದ್ದು ದೊಡ್ಡ ಸದ್ದು ಕೇಳಿಬಂದಿದೆ.