ಶಿವಮೊಗ್ಗ : ಅಬಕಾರಿ ಡಿಸಿ ಅಜಿತ್ ಕುಮಾರ್ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 315 ಲೀ. ಬೆಲ್ಲದ ಕೊಳೆ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡ ಸಮೀಪದ ಜವಳಕಟ್ಟೆ ಕೆರೆ ಬಳಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕೆರೆ ದಡದಲ್ಲಿ ಬಿಂದಿಗೆಯಲ್ಲಿ ಬೆಲ್ಲದ ಕೊಳೆಯನ್ನು ಸಂಗ್ರಹಿಸಿಟ್ಟಿದ್ದು ಅಧಿಕಾರಿಗಳ ದಾಳಿ ವೇಳೆ ಪತ್ತೆಯಾಗಿದೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯಕ್ಕೆ ಅಧಿಕಾರಿಗಳು ಬಲೆ ಬೀಸಿದ್ದಾರೆ.