ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಹಲವು ಕಡೆ ಮಧ್ಯಾನದಿಂದ ಅಬ್ಬರದ ಮಳೆ ಸುರಿದಿದೆ. ಶಿವಮೊಗ್ಗ ನಗರದಲ್ಲಿ ಮಧ್ಯಾನ ಮೂರರ ನಂತರ ಹಲವು ಭಾಗದಲ್ಲಿ ಮಳೆ ಸುರಿದು ತಂಪೆರೆದೆರೆ. ಜಿಲ್ಲೆಯ ಭದ್ರಾವತಿ, ಸಾಗರ, ತೀರ್ಥಹಳ್ಳಿ ,ಹೊಸನಗರ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿದು ಭೂಮಿಯನ್ನು ತಂಪಾಗಿಸಿದ್ದಾನೆ.
ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಮೂರು ದಿನ ಮಲೆನಾಡು ಹಾಗೂ ಗಟ್ಟ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬ್ಬರಿಸಿದ ವರುಣ.
ಉತ್ತರ ಕನ್ನಡ ಜಿಲ್ಲೆಯ,ಬನವಾಸಿ ಶಿರಸಿ,ಸಿದ್ದಾಪುರ,ಯಲ್ಲಾಪುರ, ಹೊನ್ನಾವರ ಭಾಗಗಳಲ್ಲಿ ಮಳೆ ಸುರಿದಿದೆ. ಹೊನ್ನಾವರದ ಘಟ್ಟ ಭಾಗದಲ್ಲಿ ಮಳೆ ಸುರಿದಿದ್ದು ಕರಾವಳಿ ಭಾಗದಲ್ಲಿ ಮೋಡ ಗಟ್ಟಿದ್ದು ಮಳೆ ಬೀಳುವ ಸಾಧ್ಯತೆಗಳಿವೆ. ಉಳಿದಂತೆ ಕಾರವಾರ, ಅಂಕೋಲ,ಕುಮಟಾ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರೆದಿದೆ.