ಶಿವಮೊಗ್ಗ:- ಶಿವಮೊಗ್ಗ ನಗರದ ಬಸವನಗಂಗೂರು ಬಳಿ ಜೆಲೆಟಿನ್ ತುಂಬಿದ ಲಾರಿ ಸ್ಪೋಟಗೊಂಡು 5 ಕ್ಕು ಹೆಚ್ಚು ಮಂದಿ ಸಾವು ಕಂಡಿದ್ದಾರೆ ಎಂದು ಶಂಕಿಸಲಾಗಿದೆ . ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದೆ. ಲಾರಿಯಲ್ಲಿದ್ದ ಜಿಲಟಿನ್ ಸ್ಪೋಟದ ತೀರ್ವತೆಗೆ ಲಾರಿ ಚಿದ್ರವಾಗಿದ್ದು ಬೆಳಕು ಸಹಿತ ಶಬ್ದ ದಿಂದ ಜನ ಭಯಬೀತರಾಗಿದ್ದರು.


ಕಲ್ಲು ಕ್ವಾರಿಯಲ್ಲಿ ಸ್ಪೋಟಿಸಲು ಜಿಲಿಟಿನ್ ತುಂಬಿಕೊಂಡು ಲಾರಿ ಸಂಚರಿಸುತಿತ್ತು ಎನ್ನಲಾಗಿದ್ದು ಈ ವೇಳೆ ಜಿಲಿಟಿನ್ ಕಡ್ಡಿಗಳು ಒಂದಕ್ಕೊಂದು ತಾಗಿ ಸ್ಪೋಟಗೊಂಡಿದೆ. ಸ್ಥಳಕ್ಕೆ ಡಿಸಿ ಶಿವಕುಮಾರ್. ಎಸ್ಪಿ ಶಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.
ಇನ್ನು ಭೂಮಿ ಕಂಪಿಸಿ ಶಬ್ದವಾದ ಅನುಭವ ಚಿಕ್ಕಮಗಳೂರು,ದಾವಣಗೆರೆ,ಉತ್ತರಕನ್ನಡ ಭಾಗದಲ್ಲಿ ಸಂಭವಿಸಿದ್ದು ಅಧಿಕೃತವಾಗಿ ಮಾಹಿತಿಯನ್ನು ಸ್ಥಳೀಯ ಆಡಳಿತ ನೀಡಬೇಕಿದೆ.