BREAKING NEWS
Search

Shivamogga: ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರ ಮನೆಯಮೇಲೆ ED ಅಧಿಕಾರಿಗಳ ದಾಳಿ

136

ಶಿವಮೊಗ್ಗ :- ಶಿವಮೊಗ್ಗ ದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿರುವ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು (ED Raid) ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ತೀರ್ಥಹಳ್ಳಿಯ ಕರಕುಚ್ಚಿ ಮತ್ತು ಬೆಟ್ಟಮಕ್ಕಿಯಲ್ಲಿರುವ ಮನೆಗಳು, ಶಿವಮೊಗ್ಗದ ಶರಾವತಿ ನಗರದಲ್ಲಿರುವ ಮನೆ ಮೇಲೆ ದಾಳಿಯಾಗಿದೆ.

ಮನೆ ಸುತ್ತಲು ಶಸ್ತ್ರಾಸ್ತ್ರ ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಡಿ.ಸಿ.ಸಿ ಬ್ಯಾಂಕ್ ಅವ್ಯವಹಾರದಲ್ಲಿ ಮಂಜುನಾಥ ಗೌಡರು ಭಾಗಿಯಾಗಿದ್ದಾರೆ ಎಂಬ ದೂರುಗಳಿದ್ದು ಕೋರ್ಟ ನಲ್ಲಿ ಪ್ರಕರಣ ಸಹ ನಡೆಯುತ್ತಿದೆ. ಇನ್ನು ಹೊಸ ಸಿಬ್ಬಂದಿ ನೇಮಕ ಅವ್ಯವಹಾರದ ಕುರಿತು ಸಹ ಇವರ ಮೇಲೆ ಆರೋಪಗಳಿವೆ. ಇನ್ನು ಈ ಹಿಂದೆ IT ಇಲಾಖೆ ಸಹ ದಾಳಿ ನಡೆಸಿತ್ತು.ಇನ್ನು ಇವರು ರಾಜಕೀಯವಾಗಿ ಬಿಜೆಪಿ ನಂತರ ಕಾಂಗ್ರಸ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಸದ್ಯ ED ಅಧಿಕಾರಿಗಳು ಗೌಡರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತಿದ್ದು ಹೆಚ್ಚಿನ ವಿವರ ಹೊರಬರಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!