ಪ್ರಧಾನಿ ನರೇಂದ್ರಮೋದಿ ಜನ್ಮದಿನ:ಸಾಗರದಲ್ಲಿ ಯುವಮೋರ್ಚಾದಿಂದ ರಕ್ತದಾನ ಶಿಬಿರ.

125

ವರದಿ:-ರವಿ ಸಾಗರ

ಸಾಗರ(ಶಿವಮೊಗ್ಗ):- ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ದೇಶದಾದ್ಯಂತ ಸಮಾಜಮುಖಿ ಕರ್ಯಕ್ರಮಗಳನ್ನು ಭಾರತೀಯ ಜನತಾಪಕ್ಷದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು,ಸಾಗರದಲ್ಲಿ ಯುವಮೋರ್ಚಾದಿಂದ ರಕ್ತದಾನ ಶಿಬಿರ ಆಯೋಜಿಸಿದ್ದೇವೆ ಎಂದು ಸಾಗರ ಕ್ಷೇತ್ರದ ಶಾಸಕ ಹೆಚ್.ಹಾಲಪ್ಪ ಹರತಾಳು ಹೇಳಿದರು.

ಅವರು ಸಾಗರದ ರೋಟರಿ ಕ್ಲಬ್ ಮತ್ತು ರೆಡ್‌ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ ಇಂದಿನಿಂದ ಮುಂದಿನ ಅಕ್ಟೋಬರ್ 2 ರ ಗಾಂಧಿ ಜಯಂತಿಯವರೆಗೂ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕವೇ ವಿಶ್ವನಾಯಕ ಹೆಮ್ಮೆಯ ಪ್ರಧಾನಿ ಮೋದಿಯವರಿಗೆ ಶುಭ ಹಾರೈಸುತ್ತೇವೆ ಎಂದರು.

ಹೊಸನಗರದಲ್ಲಿಯೂ ರಕ್ತದಾನ ಶಿಬಿರ,ಸ್ವಚ್ಚತಾ ಆಂದೋಲನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ.ಹಾರ ತುರಾಯಿಗಳಿಲ್ಲದೇ ಸರಳವಾಗಿ ಪರಿಣಾಮಕಾರಿಯಾಗಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಮೋದಿಯವರ ಆಶಯ ಈಡೇರಿಕೆಗೆ ಒತ್ತು ನೀಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಶ್ರೀಮತಿ ಮಧುರಾಶಿವಾನಂದ,ಸ್ಥಾಯಿಸಮಿತಿ ಅಧ್ಯಕ್ಷ ಅರವಿಂದ್‌ರಾಯ್ಕರ್,ನಗರಸಭಾ ಸದಸ್ಯರುಗಳಾದ ಗಣೇಶ್‌ಪ್ರಸಾದ್,ಶ್ರೀರಾಮು,ಸಂತೋಷ್‌ಶೇಟ್,ಮೈತ್ರಿಪಾಟೀಲ್,ಪ್ರೇಮಾಕಿರಣ್,ಆರ್.ಶ್ರೀನಿವಾಸ್ ಪ್ರಮುಖರುಗಳಾದ ವಿನೋದ್‌ರಾಜ್,ದೇವೇಂದ್ರಪ್ಪ ಯಲಕುಂದ್ಲಿ,ರವೀಂದ್ರ ಬಸ್ರಾಣಿ,ಮಹೇಶ್ ಎಂ.ಆರ್,ಸತೀಶ್‌ಬಾಬು,ಚೇತನ್‌ರಾಜ್ ಕಣ್ಣೂರು,ಸತೀಶ್‌ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!