ಶಿವಮೊಗ್ಗ :- ಶಿರಸಿ ಮೂಲದ ವ್ಯಕ್ತಿ ಯೊರ್ವ ಸಾಗರ-ತಾಳಗುಪ್ಪ ರೈಲಿಗೆ ಸಿಲುಕಿ ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಸಾಗರ ನಗರದ ಶಿರವಾಳ ರೈಲ್ವೆ ಗೇಟ್ ನಡುವೆ ನಡೆದಿದೆ.
ಶಿರಸಿ ತಾಲೂಕಿನ ಹುಲೇಕಲ್ ನ ನಾಗರಾಜ್ ಹೆಗಡೆ(31) ಎಂಬುವರೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಇವರು ಸಾಗರದ ಜೆ.ಎಂ.ಎಫ್ ಸಿ ಯಲ್ಲಿ ಬೆಂಚ್ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರೈಲಿಗೆ ಸಿಲುಕಿ ದೇಹ ಚಿದ್ರ ಚಿದ್ರಗೊಂಡಿದ್ದು ಬಹುತೇಕ ತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.