ಶಿವಮೊಗ್ಗ,ಸಾಗರದಲ್ಲಿ ಏರಿಕೆ ಕಂಡ ಕರೋನಾ-ಗದ್ದೆಯಲ್ಲಿ ಅವಿತು ಕುಳಿತ ಸೋಂಕಿತ!

777

ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು 714 ಮಂದಿಯಲ್ಲಿ ಕರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಮತ್ತೊಂದೆಡೆ ಈದಿನ 13 ಸೋಂಕಿತರು ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಮತ್ತು ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗದಲ್ಲಿ 310, ಸಾಗರದಲ್ಲಿ 137 ಪ್ರಕರಣ ವರದಿಯಾಗಿದೆ.

ಉಳಿದಂತೆ ಭದ್ರಾವತಿಯಲ್ಲಿ 36, ಶಿಕಾರಿಪುರದಲ್ಲಿ 39, ತೀರ್ಥಹಳ್ಳಿಯಲ್ಲಿ 99, ಸೊರಬದಲ್ಲಿ 67, ಹೊಸನಗರದಲ್ಲಿ 2, ಇತರೆ ಜಿಲ್ಲೆಯಿಂದ ಬಂದ 24 ಮಂದಿಯಲ್ಲಿ ಕರೋನ ಸೋಂಕು ಪತ್ತೆಯಾಗಿದೆ.

ತಾಲೂಕು ವಾರು ವಿವರ ಈ ಕೆಳಗಿನಂತಿದೆ.

ಕರೋನಾಕ್ಕೆ ಹೆದರಿ ಸೋಂಕಿತ ವ್ಯಕ್ತಿ ಪರಾರಿ-ಗದ್ದೆಯಲ್ಲಿ ಅವಿತ ಸೋಂಕಿತ!

ಕರೋನ ಸೋಂಕಿತನೊಬ್ಬ ಆಸ್ಪತ್ರೆಯಿಂದ ತಪ್ಪಿಸಿಕೊಂಡು, ಭತ್ತದ ಗದ್ದೆಯಲ್ಲಿ ಅವಿತು ಕುಳಿತು ಆಸ್ಪತ್ರೆ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಗಾಂಧಿ ಬಜಾರ್‍ನ ನಿವಾಸಿಯೊಬ್ಬರಿಗೆ (48 ವರ್ಷ) ಆರೋಗ್ಯ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು.

ಇಂದು ಚಿಕಿತ್ಸೆ ವೇಳೆ ಆತಂಕಕ್ಕೀಡಾಗಿ, ಸೋಂಕಿತ ಆಸ್ಪತ್ರೆಯಿಂದ ಹೊರಗೆ ಓಡಿ ಬಂದಿದ್ದಾನೆ. ಪಕ್ಕದ ಭತ್ತದ ಗದ್ದೆಗೆ ಜಿಗಿದು ಓಡಲು ಯತ್ನಿಸಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬೆನ್ನಟ್ಟಿ ಬಂದಿದ್ದರಿಂದ ಗದ್ದೆಯಲ್ಲೇ ಅವಿತು ಕೂರಲು ಯತ್ನಿಸಿದ್ದಾನೆ. ಸೋಂಕಿತನನ್ನ ಪತ್ತೆ ಹಚ್ಚಿ ಮನವೊಲಿಸಿದ ಸಿಬ್ಬಂದಿಗಳು ಪುನಃ ಆಸ್ಪತ್ರೆಗೆ ಕರೆ ತಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!