BREAKING NEWS
Search

ರಾಜ್ಯಪಾಲರ ನಿರ್ಗಮನದ ನಂತರ ತುಂಬಿ ಹರಿದ ಜೋಗ ಜಲಪಾತ!

1618

ಕಾರವಾರ:- ವಿಶ್ವ ಪ್ರಸಿದ್ಧ ಜೋಗ ಜಲಪಾತ ನೋಡಬೇಕು ಎಂಬುದು ಬಹುತೇಕರ ಆಸೆ. ದೇಶ ವಿದೇಶದ ಪ್ರವಾಸಿಗರು ಜೋಗ ಜಲಪಾತಕ್ಕೆ ಬಂದು ಇಲ್ಲಿನ ಸೌಂದರ್ಯ ಸವಿದು ಹೋಗುತ್ತಾರೆ. ಹೀಗಾಗಿಯೇ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಜೀವನದಲ್ಲಿ ಒಮ್ಮೆಯಾದ್ರು ನೊಡ ಜೋಗ ಗುಂಡಿ ಎಂದು “ಆಕಸ್ಮಿಕ” ಸಿನಿಮಾ ದಲ್ಲಿ ಡಾ.ರಾಜ್ ಕುಮಾರ್ ರವರು ಹಾಡಿದ್ದು.

ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ನೋಡಬೇಕು ಎಂದು ಕುದ್ದು ರಾಜ್ಯಪಾಲರಿಗೆ ಸಹ ಹಂಬಲ ಉಂಟಾಗಿತ್ತು. ಹೀಗಾಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್
ರವರು. ಜಲಪಾತವನ್ನು ವೀಕ್ಷಣೆಗಾಗಿಯೇ ಸಿದ್ದಾಪುರ ಭಾಗದಲ್ಲಿ ಬರುವ ಬ್ರಿಟೀಷ್ ಬ‌ಂಗ್ಲೋ ದಲ್ಲಿ ತಂಗಿದ್ದರು.

ಇನ್ನು ರಾಜ್ಯಪಾಲರಿಗಾಗಿ ಬತ್ತಿ ಹೋಗಿದ್ದ ಜಲಪಾತವನ್ನು ಸುಂದರವಾಗಿಸಲು ಕೆಪಿಸಿ ಯಿಂದ ನೀರು ಬಿಡಲಾಗಿತ್ತು.ರಾಜ್ಯ ಪಾಲರು ವೀಕ್ಷಿಸುವ ವೇಳೆ ಹೆಚ್ಚಿನ ನೀರು ಇರಬೇಕು, ಸುಂದರವಾಗಿ ಇರಬೇಕು ಎಂಬುದು ಕೆಪಿಸಿಯವರ ಆಕಾಂಕ್ಷೆಯಾಗಿತ್ತು.

ಆದರೇ ರಾಜ್ಯಪಾಲರು ಬಂದು ವೀಕ್ಷಿಸುವ ವೇಳೆ ಕೆಪಿಸಿಯವರು ಅಂದುಕೊಂಡಂತೆ ಜಲಪಾತಕ್ಕೆ ನೀರು ಬರಲೇ ಇಲ್ಲ. ಅಲ್ಪ ಸ್ಪಲ್ಪ ಇದ್ದ ನೀರನ್ನು ನೋಡಿ ಅದರಲ್ಲಿಯೇ ಫೋಟೋಗೆ ಫೋಸು ನೀಡಿ ರಾಜ್ಯಪಾಲರು ಬೆಂಗಳೂರಿನತ್ತ ಪ್ರಯಾಣ ಬೆಳಸಿದರು.


ಇನ್ನೇನು ರಾಜ್ಯಪಾಲರು ಹೋಗಿ ಎರಡು ತಾಸಿನಲ್ಲಿ ಜೋಗ ಜಲಪಾತ ಮೈ ದುಂಬಿ ಹರಿಯತೊಡಗಿತು. ರಾಜ್ಯಪಾಲರನ್ನು ಖುಷಿ ಪಡಿಸಲು ಬಿಟ್ಟ ನೀರು ಜಲಪಾತ ವೀಕ್ಷಣೆಗೆ ಬಂದ ಸಾಮಾನ್ಯ ಪ್ರವಾಸಿಗ ರನ್ನು ರಂಜಿಸುವಂತಾಯಿತು. ಇದಕ್ಕೆ ಹೇಳುವುದು ಹಲ್ಲು ಇದ್ದಾಗ ಕಡಲೆ ಇಲ್ಲ ,ಕಡಲೆ ಇದ್ದಾಗ ಹಲ್ಲಿಲ್ಲ ಎಂದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!