ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕುನಲ್ಲಿ ಮಂಗನಕಾಯಿಲೆ ಪ್ರಕರಣ ಹೆಚ್ಚಾಗುತಿದ್ದು ,ಸಿದ್ದಾಪುರ ತಾಲೂಕಿನ ಪುರದಮಠದ 27 ವರ್ಷ ವಯಸ್ಸಿನ ಮಹಿಳೆಗೆ ಇಂದು ಪಾಸಿಟಿವ್ ವರದಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ 2 ಕ್ಕೆ ಏರಿಕೆ ಕಂಡಿದೆ.
ಕಾಯಿಲೆ ಪೀಡಿತ ಮಹಿಳೆ ಆರೋಗ್ಯವಾಗಿದ್ದಾಳೆ,
ಇಬ್ಬರು ಜನರಿಗೆ ಹಾಗೂ ಒಂದು ಮಂಗನಲ್ಲಿ ಸೊಂಕು ಕಾಣಿಸಿಕೊಂಡಿದೆ.
ಸಿದ್ದಾಪುರದ ಕುಡಗುಂದ ವ್ಯಾಪ್ತಿಯ ಸತ್ತ ಮಂಗನಲ್ಲಿ ಕಾಯಿಲೆ ಪಾಸಿಟಿವ್ ವರದಿ ಬಂದಿದ್ದು ಜನ ಆತಂಕ ಪಡುವಂತಾಗಿದೆ. ಕಳೆದ ಎರಡು ವರ್ಷದಿಂದ ಈ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತಿದ್ದು ಇದೀಗ ಮತ್ತೆ ಕಾಣಿಸಿಕೊಂಡಿದೆ.