ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ಪಾದಯಾತ್ರೆ.ಹೆಗಡೆ ಜೊತೆ ಹೆಜ್ಜೆ ಹಾಕಿದ ಸಾರ್ವಜನಿಕರು

80

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ನಿರ್ಮಾಣ ಆಗುಬೇಕು ,ವೈದ್ಯಕೀಯ ಕಾಲೇಜು ಸ್ಥಾಪನೆಗೊಳ್ಳಬೇಕು ಎಂದು ಆಗ್ರಹಿಸಿ
ಅನಂಯಮೂರ್ತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಶಿರಸಿಯಿಂದ ಕಾರವಾರದ ವರೆಗೆ 140 ಕಿಲೋಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಶಿರಸಿ ಮಾರಿಕಾಂಬ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ನೂರಾರು ಜನರೊಂದಿಗೆ ಪಾದಯಾತ್ರೆ ಪ್ರಾರಂಭಿಸಿದ್ದು ,ನವಂಬರ್ 9 ರಂದು ಕಾರವಾರದಲ್ಲಿ ಅಂತ್ಯವಾಗಲಿದೆ.


ಇಂದು ಶಿರಸಿಯಿಂದ ಹೊರಟ ಪಾದಯಾತ್ರೆ ಕೊಳಗಿಬೀಸ್ ನಲ್ಲಿ ಮೊಕ್ಕಾಂ ಹೂಡಿದ್ದು ನಾಳೆ ದೇವಿಮನೆ ಘಟ್ಟ ತಲುಪಲಿದ್ದು ಅಲ್ಲಿ ವಿಶ್ರಮಿಸಿ ದಿವಗಿ ಕುಮಟಾ ನಂತರ ಬರ್ಗಿ ,ಅಂಕೋಲ ಮೂಲಕ ಅವದಳ್ಳಿ ತಲುಪಿ ನಂತರ ಕಾರವಾರ ತಲುಪಲಿದೆ.

ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಸಾಗಿದ್ದು,ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು.ಆದರೇ ಅನುಷ್ಟಾನವಾಗದೇ ನೆನೆಗುದಿಗೆಗೆ ಬಿದ್ದಿದ್ದು ಇದೀಗ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಚಿಗುರೊಡೆದಿದೆ.

ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಕೊರತೆ ಇದೆ ,ವೈದ್ಯರ ಕೊರತೆ ಇದ್ದು ಹೃದಯಾಘಾತ ,ಅಪಘಾತ ವಾದಾಗ ತಕ್ಷಣದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ಜನರ ಪ್ರಾಣ ಹೋಗಿದೆ. ಹೀಗಾಗಿ ಶೀಘ್ರ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳೆಗೆ ಸುಸಜ್ಜಿತ ಆಸ್ಪತ್ರೆಯಾಗಬೇಕು ಹೀಗಾಗಿ ಪಾದಯಾತ್ರೆ ಮೂಲಕ ಈ ಹೋರಾಟ ಪ್ರಾರಂಭಿಸಿರುವುದಾಗಿ ಅನಂತಮೂರ್ತಿ ಹೆಗಡೆ ಹೇಳಿದರು. ಪಾದಯಾತ್ರೆಯಲ್ಲಿ ಜೆಡಿಎಸ್ ಮುಖಂಡ ಉಪೇಂದ್ರ ಪೈ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!