ಅಂಕೊಲ -ಓಸಿ ಅಡ್ಡದ ಮೇಲೆ ಪೊಲೀಸರ ದಾಳಿ.

ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಮಟ್ಕ ಆಡಿಸುತಿದ್ದ ವ್ಯಕ್ತಿಯನ್ನು ಅಂಕೋಲ ಠಾಣೆ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್ ವಶಕ್ಕೆ ಪಡೆದು ಆತನಿಂದ ₹1240 ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನು ಬಾಸಗೋಡು ಪೂಜಗೇರಿಯ ನಿವಾಸಿ ಶಂಕರ್ ಗಾಂವಕ್ಕರ್ ಆರೋಪಿಯಾಗಿದ್ದು ಈತ ಬಾಸಗೋಡಿನಲ್ಲಿ ಜನರಿಗೆ ಹಣದ ಆವೇಶವೊಡ್ಡಿ ಮಟ್ಕ ಆಡಿಸುತಿದ್ದ. ಈ ಕುರಿತು ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದ್ದು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಾಪುರದಲ್ಲಿ ಓಸಿ ಅಡ್ಡದ ಮೇಲೆ ಪೊಲೀಸರ ದಾಳಿ.
ಕಾರವಾರ ತಾಲೂಕಿನ ಮಲ್ಲಾಪುರದ ಹಿಂದೂವಾಡದ ಬಸ್ ನಿಲ್ದಾಣದಲ್ಲಿ ಓಸಿ ಆಡಿಸುತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲ್ಲಾಪುರ ಲಕ್ಷ್ಮಿನಗರದ ರಾಜೇಶ್ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪಿ.ಎಸ್.ಐ ಸಿದ್ದಪ್ಪ ಗುಡಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಬಂಧಿತ ಆರೋಪಿಯಿಂದ 720 ರೂ ವನ್ನು ವಶಕ್ಕೆ ಪಡೆಯಲಾಗಿದ್ದು ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲದಲ್ಲಿ ಹಳ್ಳಕ್ಕೆ ಬಿದ್ದು ಬಾಲಕ ಸಾವು.
ಪಕ್ಕದ ಮನೆಗೆ ಹೋಗುವಾಗ ಕಾಲು ಜಾರಿ ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಿದ್ದು ಬಾಲಕ ಸಾವುಕಂಡ ಘಟನೆ ಜಿಲ್ಲೆಯ ಅಂಕೋಲ ತಾಲೂಕಿನ ಮೊಗಟಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆಂಕಣಿಯಲ್ಲಿ ನಡೆದಿದೆ. ಭರತ್ (13)ಮೃತಪಟ್ಟ ಬಾಲಕನಾಗಿದ್ದು
ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ಸೆ.9 ಕ್ಕೆ ಸಾಮಾಜಿಕ ಹೋರಾಟಗಾರ ಮಾಧವನಾಯ್ಕ ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ.
ಕಾರವಾರದ ಯುದ್ದನೌಕೆಯ ಮ್ಯೂಸಿಯಂ ನಲ್ಲಿ ಸಿಬ್ಬಂದಿಗಳಿಗೆ ಎಂಟು ತಿಂಗಳಿಂದ ಗೌರವ ಧನ ನೀಡುವುದು ಬಾಕಿ ಇದ್ದು ಜಿಲ್ಲಾಡಳಿತ ಬಾಕಿ ಇರುವ ಗೌರವ ಧನ ವನ್ನು ಬಿಡುಗಡೆ ಮಾಡದಿದ್ದರೆ ಇದೇ ತಿಂಗಳ ಸೆ.9 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಎಂದು ಜನಶಕ್ತಿ ಸಂಘಟನೆ ಯ ಅಧ್ಯಕ್ಷ ಮಾಧವ ನಾಯ್ಕ ಎಚ್ಚರಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋಧನೆ ನೀಡುವ ವಿಡಿಯೊ ವೈರಲ್ ಆಗುತಿದ್ದು ಈ ವಿಡಿಯೊ ಹರಿಬಿಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಅವಳಿ ಕರುಗಳಿಗೆ ಜನ್ಮ ನೀಡಿದ ಹಸು.

ಶಿರಸಿ ತಾಲೂಕಿನ ಇಟಗಿ ಸಮೀಪದ ಹೊನ್ನೆ ಮಡಿಕೆಯ ಗಜಾನನ ಚಿದಂಬರ್ ಹೆಗಡೆ ಎಂಬುವವರ ಮನೆಯಲ್ಲಿ ಗೀರ್ ತಳಿಯ ಆಕಳು ಅವಳಿ ಕರುಗಳಿಗೆ ಜನ್ಮ ನೀಡಿದೆ.ಬಹುತೇಕ ಆಕಳುಗಳು ಒಂದು ಕರುವನ್ನು ಹಾಕುತ್ತದೆ.ಆದರೇ ಈ ಗೀರ್ ತಳಿಯ ಹಸುವು ಅವಳಿ ಕರುಗಳನ್ನು ಹಾಕಿದ್ದು ಇದೀಗ ಊರಿನವರ ಆಕರ್ಷಣೆಗೆ ಕಾರಣವಾಗಿದೆ.
ಮುಂಡಗೋಡು- ಬಂಗಾರದ ಆಸೆ ತೋರಿಸಿ ಹಣ ದೋಚುತಿದ್ದವರು ಅಂದರ್-₹19 ಲಕ್ಷ ವಶ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ ವಂಚಿಸುತಿದ್ದ ಶಿವಮೊಗ್ಗ ಜಿಲ್ಲೆಯ ಮೂಲದ ಆರು ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನವೂ ಸೇರಿ ₹19 ಲಕ್ಷವನ್ನು ಮುಂಡಗೋಡು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವಿರೇಶ್ ತೀರ್ಥಪ್ಪ ,ವೆಂಕಟೇಶ್ ಸಣ್ಣವೀರಪ್ಪ ,ಕುಮಾರ್ ಗದಿಗಪ್ಪ,ತೀರ್ಥಪ್ಪ ಹಸಿಗಪ್ಪ,ವಿದ್ಯಾದರ ,ಸಾಗರದ ಸುಭಾಷ್ ನಗರದ ಪ್ರಶಾಂತ್ ವಿರೇಶ್ ಬಂಧಿತ ಆರೋಪಿಗಳು. ಬಂಧಿತರು ಜೂ.16 ರಂದು ಮುಂಡಗೋಡು ತಾಲೂಕಿನ ಮಳಗಿ ಗ್ರಾಮದ ಧರ್ಮ ಜಲಾಶಯದ ಬಳಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಿವನಗೌಡ ಮಾದೇಗೌಡ ಪಾಟೀಲ್ ಎಂಬುವವರಿಗೆ ನಕಲಿ ಬಂಗಾರ ತೋರಿಸಿ ಆತನಿಂದ ಹಣ ಪಡೆದು ಪರಾರಿಯಾಗಿದ್ದರು.
ಈ ಬಗ್ಗೆ ಮುಂಡಗೊಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿ.ವೈ.ಎಸ್.ಪಿ ರವಿ ನಾಯ್ಕ ನೇತ್ರತ್ವದಲ್ಲಿ ಸಿ.ಪಿ.ಐ ಪ್ರಭುಗೌಡ, ಪಿ.ಎಸ್.ಐ ಬಸವರಾಜ್ ಸಿಬ್ಬಂದಿಗಳಾದ ವಿನೋದ್ ,ಶರತ್ ಧರ್ಮರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿರಸಿ- ಶಿವರಾಮ್ ಹೆಬ್ಬಾರ್ ರಿಂದ ಶಿಕ್ಷಕ ಪ್ರಶಸ್ತಿ ಪ್ರದಾನ.

ಶಿರಸಿಯಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಶಿರಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ” ಶಿಕ್ಷಕರ ದಿನಾಚರಣೆ ಹಾಗೂ ಗುರು ಗೌರವಾರ್ಪಣಾ ಸಮಾರಂಭವನ್ನು ” ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಕರಿಗೆ ತುರ್ತು ಸ್ಥಿತಿಯಲ್ಲಿ ನೆರವಾಗುವ ಶಿಕ್ಷಕ ಬಂಧು ಎಂಬ ವಿನೂತನ ಕಾರ್ಯಕ್ರಮಕ್ಕೆ ಮಾನ್ಯ ಸಚಿವರು ಚಾಲನೆ ನೀಡಿ, ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿ, ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಡಿಡಿಪಿಐ ದಿವಾಕರ ಶೆಟ್ಟಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಿ.ಆರ್.ನಾಯ್ಕ, ಬಿಇಓ ಎಂ.ಎಸ್.ಹೆಗಡೆ ಉಪಸ್ಥಿತರಿದ್ದರು.