ಶಿರಸಿ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯಲ್ಲಿ ಮಹಿಳೆಯೊಬ್ಬರು ಎ.ಎಸ್.ಐ ಅತ್ಯಾಚಾರ ಮಾಡಿದ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಎ.ಎಸ್.ಐ ಮಾದೇವ ಹಸ್ಲರ್ ಎಂಬ ಸಹಾಯಕ ಪೊಲೀಸ್ ಇನ್ಸಪೆಕ್ಟರ್ ಮೇಲೆ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು. ಬನವಾಸಿಯ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸ್ನೇಹ ಬೆಳಸಿ ಅತ್ಯಾಚಾರ ಮಾಡಿದ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಮಹಿಳೆ ಬಳಿ ಹಣ ಪಡೆದು ಈಕೆಗೆ ಕಿರುಕುಳ ನೀಡುತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.