





ಕಾರವಾರ :- ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿ ಕೇಳುವ ನೆಪದಲ್ಲಿ ಬಂಗಾರದ ಸರ ದೋಚಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭತ್ತದ ಓಣಿಯಲ್ಲಿ ನಡೆದಿದೆ.
ಬಿಳಿ ಕಾರಿನಲ್ಲಿ ಬಂದ ದರೋಡೆಕೋರರಿಂದ ಕೃತ್ಯ ನಡೆದಿದ್ದು ,ಉಷಾ ದಾಮೋದರ ಪೈ ಎಂಬುವವರೇ ಬಂಗಾರದ ಸರ ಕಳೆದುಕೊಂಡವರಾಗಿದ್ದಾರೆ.

ಆರೋಪಿಗಳು ಕುಮಟಕ್ಕೆ ಹೋಗುವ ಮಾರ್ಗ ಕುರಿತು ಕಾರು ನಿಲ್ಲಿಸಿ ಮಹಿಳೆ ಬಳಿ ಕೇಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಹರಿದು ಪರಾರಿಯಾಗಿದ್ದಾರೆ.
ಅಂದಾಜು ಮೌಲ್ಯ ₹1.10,000 ಲಕ್ಷ ರೂ ಗಳ ಬಂಗಾರದ ಸರ ಇದಾಗಿದ್ದು ಸಿ.ಪಿ.ಐ. ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.