BREAKING NEWS
Search

ಶಿರಸಿ-ಕಾಲೇಜು ವಿದ್ಯಾರ್ಥಿನಿ ಅಪಹರಣದ ಸುತ್ತ ಪ್ರೇಮದ ಬಲೆ! ಆಗಿದ್ದೇನು?

9520

ಕಾರವಾರ:- ಕಾಲೇಜಿಗೆ ಹೋಗುತಿದ್ದ ವಿದ್ಯಾರ್ಥಿನಿಯೊರ್ವಳನ್ನು ಮೂವರು ಯುವಕರು ಕಾರಿನಲ್ಲಿ ಬಂದು ಅಪಹರಣ ಮಾಡಿರುವುದಾಗಿ ಶಿರಸಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲಿ ಏನಿದೆ?

ಶಿರಸಿ ಗ್ರಾಮೀಣ ಠಾಣೆ cr no 111/21 ರಲ್ಲಿ ಫಿರ್ಯಾದಿ ಶ್ರೀಮತಿ ರೇಣುಕಾ ಪರಮೇಶ್ವರ ಮುಕ್ಕಣ್ಣನವರ್ ಎಂಬುವವರು ಠಾಣೆಗೆ ಬಂದು ನೀಡಿದ ದೂರಿನಂತೆ ರಾಯಪ್ಪ ಕಾಲೇಜಿಗೆ ಹೋಗುತ್ತಿದ್ದ ನನ್ನ ಮಗಳನ್ನು ಟಿಪ್ಪು ನಗರ ಕ್ರಾಸ್,ಬನವಾಸಿ ರಸ್ತೆ ಯಿಂದ ಅಪರಾಧಿಕ ಉದ್ದೇಶದಿಂದ ಯಾವುದೋ ಕಾರ್ ನಲ್ಲಿ ಬಂದು ಬಲವಂತವಾಗಿ ಮೂರು ಜನ ಆಸಾಮಿಗಳು ಅಪಹರಿಸಿಕೊಂಡು ಹೋಗಿರುತ್ತಾರೆ.ಈ ಕುರಿತು ತನಿಖೆ ನಡೆಸುವಂತೆ ದೂರು ನೀಡಲಾಗಿದೆ.

ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿ! ಹಲವು ಅನುಮಾನಗಳ ಸುತ್ತ!

ಅಪಹರಣಕ್ಕೊಳಗಾದ ವಿದ್ಯಾರ್ಥಿನಿಯು ಅನ್ಯಕೋಮಿನ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು ಎಂಬ ಸುದ್ದಿಗಳು ಹರಿದಾಡುತ್ತಿದೆ.
ಈಕೆ ಕೆಲವು ವರ್ಷಗಳಿಂದ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತಿದ್ದು ,ಈ ವಿಷಯ ಅವರ ಸಹಪಾಠಿಗಳಿಗೂ ತಿಳಿದಿತ್ತು ಎಂಬ ವಿಷಯವು ಪೊಲೀಸರ ತನಿಖೆ ವೇಳೆ ಹೊರಬಿದ್ದಿದೆ‌ .

ನೂರಾರು ಜನ ಓಡಾಡುವ ರಸ್ತೆಯಲ್ಲಿ ಕಾರು ನಿಲ್ಲಿಸಿ ಆಕೆಯನ್ನು ಕರೆದುಕೊಂಡು ಹೋಗಲಾಗಿದೆ. ಒಂದು ಮೂಲದ ಮಾಹಿತಿ ಪ್ರಕಾರ ಪೊಲೀಸರಿಗೂ ಸಿಸಿ ಕ್ಯಾಮರಾ ದೃಶ್ಯ ದೊರೆತಿದ್ದು ,ತನಿಖೆ ಕೈ ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೇ ಎರಡು ಪ್ರತ್ತೇಕ ಕೋಮುಗಳಾಗಿದ್ದರಿಂದ ಗಲಾಟೆ ಆಗುವ ಸಾಧ್ಯತೆಗಳಿದ್ದು ಇದೀಗ ಈ ಅಪಹರಣದ ಪ್ರಕರಣ ಕೋಮು ಘರ್ಷಣೆಯ ತಿರುವು ಪಡೆಯುತ್ತಿದ್ದು ಬೂದಿ ಮುಚ್ಚಿದ ಕೆಂಡದಂತಿದ್ದು ಮುಂದೆ ಯಾವ ತಿರುವು ಪಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!