₹42 ಲಕ್ಷ ಎಗರಿಸಿದ ಶಿರಸಿ ಯುವಕನ ಬಂಧನ

1186

ಕಾರವಾರ :-ವ್ಯಕ್ತಿಯನ್ನು ಗಮನವನ್ನು ಬೇರೆಡೆ ಸೆಳೆದು ₹42 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣದಲ್ಲಿ ದಾಖಲಾಗಿದ್ದ ದೂರಿನನ್ವಯ ಅಲ್ಲಿನ ಪೊಲೀಸರು ಶಿರಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮದ್ ಇಬ್ರಾಹಿಂ ಕಲಬುರ್ಗಿ ಯಾನೆ ರೆಡ್ಡಿ (45) ಎಂಬಾತನಾಗಿದ್ದಾನೆ. ಕಾರ್ ಬ್ರೋಕರ್ ಆಗಿರುವ ಮೊಹಮದ್ ಶಿರಸಿ ತಾಲೂಕಿನ ರಾಮನಬೈಲ್ ನಿವಾಸಿಯಾಗಿದ್ದಾನೆ.

ಆರೋಪಿಯ ಪತ್ತೆಗೆ ಶಿರಸಿ ಡಿವೈಎಸ್ಪಿ ರವಿ‌ ನಾಯ್ಕ, ಸಿಪಿಐ ರಾಮಚಂದ್ರ‌ ನಾಯಕ ಮಾರ್ಗದರ್ಶನದಲ್ಲಿ ಸಹಕಾರ ನೀಡಿದರ ಪರಿಣಾಮ ಆರೋಪಿ ಪೊಲೀಸ್ ವಶಕ್ಕೆ ಸಿಕ್ಕಿದ್ದು, ತೆಲಂಗಾಣ ಪೊಲೀಸರು ಶಿರಸಿ ಪೊಲೀಸರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!