ಕಾರವಾರ :- ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಉರ್ದು ಶಾಲೆಯ ಹಿಂಭಾಗದ ಕಾಡಿನ ಜಾಗದಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ದನವನ್ನು ಕಡಿಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗೋವನ್ನು ಕಡಿಯುತಿದ್ದ ಆರೋಪಿ ನಜೀರ್ ಅಹಮದ್ ಎಂಬುವವನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿ ಕೊಂಡಿದ್ದು ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಹೆಚ್ಚು ರವಿ ಡಿ ನಾಯ್ಕ ಶಿರಸಿ ಉಪವಿಭಾಗ,ಶಿರಸಿ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್ ಇವರ ಮಾರ್ಗದರ್ಶನದಲ್ಲಿ ಶಿರಶಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಈರಯ್ಯ ಡಿ.ಎನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಪ್ರದೀಪ್ ರೇವಣಕರ್, ಗಣಪತಿ ನಾಯ್ಕ, ಚೇತನ್ ಜೆಎನ್, ಸುನಿಲ್ ಹಡಲಗಿ, ಶ್ರೀಧರ್ ನಾಯ್ಕ,ಆನಂದ ಬಬ್ಲಿ ಇವರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದು ದಾಳಿ ವೇಳೆ ಓಡಿ ಹೋದ ಉಳಿದ ನಾಲ್ಕು ಜನ ಆರೋಪಿಗಳಿಗಾಗಿ ತನಿಖೆ ಮುಂದುವರೆಸಿದ್ದಾರೆ.