ಕಾರವಾರ/ಶಿರಸಿ :-ನೀರಿನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ಇಂದು ನಡೆದಿದೆ.
ಶಿರಸಿಯ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಖನ್ ಶಿಂಧೆ (17) ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿಯಾಗಿದ್ದು, ಇಂದು ಮಧ್ಯಾಹ್ನ ಕೆಂಗ್ರೆ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈವೇಳೆ ನೀರಿನಲ್ಲಿ ಮುಳುಗಿ ಸಾವುಕಂಡಿದ್ದನು.ಆದರೇ ಈತನ ಶವ ದೊರೆಯದ ಕಾರಣ ಪೊಲೀಸರು, ಅಗ್ನಿಶಾಮಕ ದಳದ ಜಂಟಿ ಕಾರ್ಯಾಚರಣೆಯಿಂದ ಇಂದು ಸಂಜೆ ಶವ ಹೊರಕ್ಕೆ ತೆಗೆಯಲಾಗಿದೆ.
ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.